ಪೆಪ್ಸಿ, ಕೋಕ್ ಕಂಪನಿಗಳಿಗೆ ನೀರು ಪೂರೈಕೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಜಾ

By Suvarna Web DeskFirst Published Mar 2, 2017, 2:45 PM IST
Highlights

ತಮಿರಬರಾನಿ ನದಿ ನೀರನ್ನು ಪೆಪ್ಸಿ, ಕೋಕೋ ಕೋಲಾ ಕಂಪನಿಗಳಿಗೆ ತಂಪು ಪಾನೀಯಗಳನ್ನು ತಯಾರಿಸಲು ಪೂರೈಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ನವದೆಹಲಿ (ಮಾ.02): ತಮಿರಬರಾನಿ ನದಿ ನೀರನ್ನು ಪೆಪ್ಸಿ, ಕೋಕೋ ಕೋಲಾ ಕಂಪನಿಗಳಿಗೆ ತಂಪು ಪಾನೀಯಗಳನ್ನು ತಯಾರಿಸಲು ಪೂರೈಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ನೀರು ಪೂರೈಕೆ ಮೇಲೆ ನಿರ್ಬಂಧ ಹೇರಲಾಗುವುದಿಲ್ಲ ಎಂದು ನವೆಂಬರ್ ನಲ್ಲಿ ನೀಡಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಪೆಪ್ಸಿ ಕೋಕೋಕೋಲ ಕಂಪನಿಯು ನೀರನ್ನು ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಅದನ್ನು ಗಾಳಿಗೆ ತೂರಿವೆ ಎಂದು ಅರ್ಜಿದಾರರು ಆರೋಪಿಸಿದ್ದರು.  

ವಿದೇಶಿ ಕಂಪನಿಗಳ ಪಾನೀಯವನ್ನು ಬಹಿಷ್ಕರಿಸುವಂತೆ ತಮಿಳುನಾಡು ವ್ಯಾಪಾರಿ ಸಂಘಟನೆಗಳು ನಿನ್ನೆ ಕರೆ ನೀಡಿದ್ದವು. ಇಂದು ನ್ಯಾಯಾಲಯ ನೀಡಿರುವ ತೀರ್ಪು ಈ ಸಂಘಟನೆಗಳಿಗೆ ಹಿನ್ನೆಡೆಯಾಗಿದೆ.

ಕಂಪನಿಗಳು ನಿಯಮಗಳನ್ನು ಗಾಳಿಗೆ ತೂರಿವೆ. ಮೊದಲನೆಯದಾಗಿ ಈ ಪಾನೀಯಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಬರಪೀಡಿತ ಪ್ರದೇಶದಿಂದ ನೀರನ್ನು ತೆಗೆದುಕೊಳ್ಳುವುದರಿಂದ ಅಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಜಲ್ಲಿಕಟ್ಟನ್ನು ಪೇಟಾ ವಿರೋಧಿಸಿರುವುದನ್ನು ಮುಂದಿಟ್ಟುಕೊಂಡು ವಿದೇಶಿ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸಲು ವ್ಯಾಪಾರಿಗಳು ಕರೆ ಕೊಟ್ಟಿದ್ದರು. ನಿನ್ನೆ ಶೇ. 70 ಕ್ಕೂ ಹೆಚ್ಚಿನ ವ್ಯಾಪಾರಿಗಳು ಪೆಪ್ಸಿ, ಕೋಕೋಕೋಲಾ  ಪಾನೀಯಗಳನ್ನು ಬಹಿಷ್ಕರಿಸಿದ್ದರು.

 

click me!