ಮಧ್ಯಪ್ರದೇಶದಲ್ಲಿ 15 ವರ್ಷದ ಬಳಿಕ ಅಧಿಕಾರದತ್ತ ಕಾಂಗ್ರೆಸ್

By Web DeskFirst Published Dec 12, 2018, 10:02 AM IST
Highlights

ಮ.ಪ್ರ: ಜಯದ ಹಾವು-ಏಣಿ ಆಟ..! ಮಧ್ಯಪ್ರದೇಶದಲ್ಲಿ 15 ವರ್ಷದ ಬಳಿಕ ಅಧಿಕಾರದತ್ತ ಕಾಂಗ್ರೆಸ್ ಪಯಣ | ಬೆಳಗ್ಗೆಯಿಂದ ತಡರಾತ್ರಿವರೆಗೂ ಫಲಿತಾಂಶದ ಬಗ್ಗೆ ರೋಚಕ ಕುತೂಹಲ

ಭೋಪಾಲ್ (ಡಿ. 12): ಹಿಂದಿ ನಾಡಿನ ಪ್ರಮುಖ ರಾಜ್ಯ ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿ ಬಳಿ ಇದ್ದ ಅಧಿಕಾರ ಯಾರ ಮಡಿಲಿಗೆ ಒಲಿಯಲಿದೆ ಎಂಬ ಕುತೂಹಲ ರೋಚಕ ಘಟ್ಟ ತಲುಪಿದೆ. ಮಂಗಳವಾರ ಮತ
ಎಣಿಕೆ ಆರಂಭವಾದಾಗಿನಿಂದಲೂ ಕಂಡುಬಂದ ಹಾವು- ಏಣಿಯಾಟದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಆದರೆ ಅತ್ಯಲ್ಪ ಅಂತರದಲ್ಲೇ ಬಿಜೆಪಿ ಹಿಂದಿದೆ. ತಡರಾತ್ರಿವರೆಗೂ ಎಣಿಕೆ ಮುಂದುವರಿದೇ ಇತ್ತು. ಈ ನಡುವೆ, ೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯ ಘೋಷಣೆ ಮಾಡದೇ ಚುನಾವಣಾ ಆಯೋಗ ಬಿಜೆಪಿ ಅಣತಿಯಂತೆ ಕುಣಿಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬಿಜೆಪಿಗೆ ಹಿನ್ನಡೆ:ರಾಜಸ್ಥಾನ, ಛತ್ತೀಸ್‌ಗಢ ಕೈತಪ್ಪಬಹುದು, ‘ಜನಪ್ರಿಯ ಮುಖ್ಯಮಂತ್ರಿ’ ಶಿವರಾಜ ಸಿಂಗ್ ಚೌಹಾಣ್ ದೆಸೆಯಿಂದಾಗಿ ಮಧ್ಯಪ್ರದೇಶವನ್ನು ತಾನು ಉಳಿಸಿಕೊಳ್ಳಬಹುದು ಎಂಬ ವಿಶ್ವಾಸದಲ್ಲಿ ಬಿಜೆಪಿ ಇತ್ತು.
ಆದರೆ ಗೆಲುವು ಯಾರಿಗೆ ಎಂಬುದನ್ನು ತಿಳಿಯಲು ಮತದಾರರು ತಡರಾತ್ರಿರೆಗೂ ಕಾಯುತ್ತಲೇ ಇದ್ದರು.

‘ಮ್ಯಾಜಿಕ್ ನಂಬರ್’ ಗಡಿಯಲ್ಲಿ ಕಾಂಗ್ರೆಸ್ ಸಂಖ್ಯೆ ಆಚೀಚೆ ಓಡಾಡುತ್ತಿದ್ದುದೇ ಇದಕ್ಕೆ ಕಾರಣ. 1993 ರಿಂದ 2003 ರವರೆಗೆ ಕಾಂಗ್ರೆಸ್ಸಿನ ದಿಗ್ವಿಜಯ ಸಿಂಗ್ ಅವರು ಮಧ್ಯಪ್ರದೇಶವನ್ನು ಆಳಿದ್ದರು. ಅವರ ವಿರುದ್ಧದ ಆಡಳಿತ ವಿರೋಧಿ ಅಲೆ ಹಾಗೂ ಉಮಾ ಭಾರತಿ ಅವರ ಅಬ್ಬರದ ಪ್ರಚಾರದಿಂದಾಗಿ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೇರಿದ ಬಿಜೆಪಿ, ಆನಂತರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದೇ ಇಲ್ಲ.

ಹುಬ್ಬಳ್ಳಿ ಈದ್ಗಾ ಮೈದಾನ ಗಲಭೆ ಪ್ರಕರಣ ಸಂಬಂಧ ಕೋರ್ಟ್ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಉಮಾ ಭಾರತಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆನಂತರ ಬಾಬುಲಾಲ್ ಗೌರ್ ಅವರನ್ನು ತಾತ್ಕಾಲಿಕ ಅವಧಿಗೆ ಮುಖ್ಯಮಂತ್ರಿ ಮಾಡಲಾಗಿತ್ತು. 2005 ರಲ್ಲಿ ಮುಖ್ಯಮಂತ್ರಿಯಾದ ಶಿವರಾಜ್ ಬಿಜೆಪಿಯನ್ನು ಮಧ್ಯಪ್ರದೇಶದಲ್ಲಿ ಮತ್ತಷ್ಟು ಗಟ್ಟಿಗೊಳಿಸಿದರು.

‘ಬಿಮಾರು’ ರಾಜ್ಯಗಳಲ್ಲಿ ಒಂದಾಗಿದ ಮಧ್ಯಪ್ರ ದೇಶವನ್ನು ಅಭಿವೃದ್ಧಿಯೆಡೆಗೆ ಒಯ್ದ ಚೌಹಾಣ್ ಅವರಿಗೆ ಇತ್ತೀಚೆಗೆ ಆಡಳಿತ ವಿರೋಧಿ ಅಲೆ ಸುತ್ತುವರಿದಿತ್ತು. 15 ವರ್ಷಗಳಿಂದ ನಿರಂತರವಾಗಿ ಮುಖ್ಯಮಂತ್ರಿಯಾಗಿದ್ದಾರೆ, ಅವರ ಕುಟುಂಬ ಹಾಗೂ ಆಪ್ತರಿಗಷ್ಟೇ ಲಾಭ ಮಾಡಿಕೊಟ್ಟಿದ್ದಾರೆ ಎಂಬ ವಿಷಯಗಳು ಮತದಾರರನ್ನು ಕಾಡಲು ಆರಂಭಿಸಿದ್ದವು. ಜತೆಗೆ ಮಂಡಸೌರ್ ರೈತ ಗಲಭೆಯಿಂದ ಚೌಹಾಣ್ ಜನಪ್ರಿಯತೆ ಕುಗ್ಗಿತ್ತು. ಈ ನಡುವೆ, ಒಡೆದ ಮನೆಯಾಗಿದ್ದ ಕಾಂಗ್ರೆಸ್ ಪಕ್ಷ
ಒಗ್ಗೂಡಿ ಈ ಚುನಾವಣೆ ಎದುರಿಸಿತು. ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿಲಾಗಿ ಮಾಡಿಕೊಂಡು ಪಕ್ಷ ಸಂಘಟನೆ ಮಾಡಿತು.

ಕಮಲ್‌ನಾಥ್, ದಿಗ್ವಿಜಯ್ ಸಿಂಗ್ ಹಾಗೂ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ತಂಡಕ್ಕೆ ಹೊಣೆಗಾರಿಕೆ ವಹಿಸಿ, ಪಕ್ಷ ಸಂಘಟನೆ ಮಾಡಿತ್ತು. ಜತೆಗೆ ಗೋಶಾಲೆ ತೆರೆಯುವುದೂ ಸೇರಿದಂತೆ ಹಿಂದುಗಳನ್ನು ಓಲೈಸಲು ಹಲವು ಭರವಸೆಗಳನ್ನು ನೀಡಿತು. 

ಕಾಂಗ್ರೆಸ್ ಮುನ್ನಡೆಗೆ ಕಾರಣಗಳು

1. ಸರ್ಕಾರದ ವಿರುದ್ಧ ರೈತರಿಗಿದ್ದ ಸಿಟ್ಟನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ಬಳಸಿಕೊಂಡಿತು.
2. ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ, ರೈತರಿಗೆ ಮಾತ್ರ ಲಾಭವಿರಲಿಲ್ಲ. ಸರ್ಕಾರದ ಯೋಜನೆಗಳು ಫಲ ಕೊಟ್ಟಿರಲಿಲ್ಲ. ರಾಹುಲ್ ಗಾಂಧಿ ನೀಡಿದ ಸಾಲ ಮನ್ನಾ ಭರವಸೆ ಬಹುವಾಗಿ ಕೆಲಸ ಮಾಡಿತು.

3. ಬಹುಸಂಖ್ಯಾತ ಹಿಂದುಗಳನ್ನು ಓಲೈಸಲು ಮೃದು ಹಿಂದುತ್ವ ಅಳವಡಿಕೆ ಫಲ ನೀಡಿತು. ರಾಹುಲ್ ಅವರ ದೇಗುಲ ಯಾತ್ರೆ, ಪ್ರಣಾಳಿಕೆಯಲ್ಲಿನ ಗೋಶಾಲೆ ಭರವಸೆಗಳು ಮತದಾರರ ಮನಗೆದ್ದವು.
4. ರಾಜ್ಯ ಅಭಿವೃದ್ಧಿ ಹೊಂದುತ್ತಿದೆ ಎಂದು ಬಿಜೆಪಿ ಹೇಳುತ್ತಿದ್ದರೂ ಬುಂದೇಲ್‌ಖಂಡ್‌ನಂತಹ ಪ್ರಾಂತ್ಯಗಳಲ್ಲಿ ಜನರ ವಲಸೆ ತಪ್ಪಿರಲಿಲ್ಲ. ಅದನ್ನು ಕಾಂಗ್ರೆಸ್ ಚೆನ್ನಾಗಿ ಬಿಂಬಿಸಿತು.
5.  ವ್ಯಾಪಂ ಹಗರಣ, ಮುಖ್ಯಮಂತ್ರಿಗಳ ಪರಿವಾರದ ದರ್ಬಾರ್, ಸ್ಥಳೀಯ ಹಂತದಲ್ಲಿ ಶಾಸಕರ ವಿರುದ್ಧದ ಸಿಟ್ಟು ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಿತು.

ಬಿಜೆಪಿ ಹಿನ್ನಡೆಗೆ ಕಾರಣ ಏನು?

1. ನಿರಂತರವಾಗಿ 15 ವರ್ಷಗಳಿಂದ ಒಂದೇ ಪಕ್ಷ ಆಳ್ವಿಕೆ ನಡೆಸುತ್ತಿದ್ದರಿಂದ ಮತದಾರರಲ್ಲಿ ಬದಲಾವಣೆಯ ಕೂಗು ಎದ್ದಿತು. ಇದು ಬಿಜೆಪಿಯ ಪಾಲಿಗೆ ಮುಳುವಾಯಿತು.
2.  ತಳಮಟ್ಟದಲ್ಲಿ ಬಿಜೆಪಿ ಶಾಸಕರ ನಡವಳಿಕೆ ಬಗ್ಗೆ ಮತದಾರರಲ್ಲಿ ಆಕ್ರೋಶ ಮಡುಗಟ್ಟಿತ್ತು. ಇದನ್ನು ಪರಿಹರಿಸಲು ಪಕ್ಷದ ನಾಯಕರು ಗಮನ ಹರಿಸಲಿಲ್ಲ
3.  ಪರ‌್ಯಾಯ ಆಯ್ಕೆಯಾಗಿ ಕಾಂಗ್ರೆಸ್ ಕಾಣಿಸಿದ್ದು ಹಾಗೂ ಆ ಪಕ್ಷದಲ್ಲಿದ್ದ ಒಗ್ಗಟ್ಟು.
4.  ಮಂಡಸೌರ್‌ನಲ್ಲಿ ಸರ್ಕಾರ ನಡೆಸಿದ ಗೋಲಿಬಾರ್, ರೈತರಿಗೆ ಸರ್ಕಾರದ ಮೇಲಿದ್ದ ಆಕ್ರೋಶ. ಇದನ್ನು ಕಾಂಗ್ರೆಸ್ ಚೆನ್ನಾಗಿ ಬಳಸಿಕೊಂಡಿತು.
5.  ಕಾಂಗ್ರೆಸ್ಸಿನ ಸಾಲ ಮನ್ನಾ ಅಸ್ತ್ರಕ್ಕೆ ಬಿಜೆಪಿ ಬಳಿ ಪ್ರತ್ಯಸ್ತ್ರವಿರಲಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಯ

click me!