ಮಧ್ಯಪ್ರದೇಶ: ಮುಂದುವರಿದ ರೈತರ ವ್ಯಥೆ; ಎತ್ತುಗಳ ಬದಲಿಗೆ ಹೆಣ್ಮಕ್ಕಳನ್ನು ಬಳಸಿ ಹೊಲ ಉಳುಮೆ

Published : Jul 09, 2017, 12:44 PM ISTUpdated : Apr 11, 2018, 12:38 PM IST
ಮಧ್ಯಪ್ರದೇಶ: ಮುಂದುವರಿದ ರೈತರ ವ್ಯಥೆ; ಎತ್ತುಗಳ ಬದಲಿಗೆ ಹೆಣ್ಮಕ್ಕಳನ್ನು ಬಳಸಿ ಹೊಲ ಉಳುಮೆ

ಸಾರಾಂಶ

ರೈತರ ಆತ್ಮಹತ್ಯೆ ಸರಣಿ ಮುಂದುವರಿದಿರುವ ಬೆನ್ನಲ್ಲೇ, ಆರ್ಥಿಕ ಅಡಚಣೆಯಿಂದಾಗಿ ರೈತನೊಬ್ಬ ಇಬ್ಬರು ಹೆಣ್ಮಕ್ಕಳನ್ನೇ ಬಳಸಿ ಹೊಲ ಉಳುಮೆ ಮಾಡಿದ ಘಟನೆ ನಡೆದಿದೆ. ಎತ್ತನ್ನು ಕೊಳ್ಳಲು ಹಣ ಇಲ್ಲದ ಕಾರಣ ರೈತನೊಬ್ಬ ಎತ್ತುಗಳ ಬದಲಿಗೆ ತನ್ನಿಬ್ಬರು ಹೆಣ್ಮಕ್ಕಳನ್ನು ಬಳಸಿಕೊಂಡು ಹೊಲ ಉಳುಮೆ ಮಾಡಿದ್ದಾನೆ.

ನವದೆಹಲಿ (ಜು. 09): ಮಧ್ಯಪ್ರದೇಶದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿರುವ ಬೆನ್ನಲ್ಲೇ, ಆರ್ಥಿಕ ಅಡಚಣೆಯಿಂದಾಗಿ ರೈತನೊಬ್ಬ ಇಬ್ಬರು ಹೆಣ್ಮಕ್ಕಳನ್ನೇ ಬಳಸಿ ಹೊಲ ಉಳುಮೆ ಮಾಡಿದ ಘಟನೆ ನಡೆದಿದೆ.

ಎತ್ತನ್ನು ಕೊಳ್ಳಲು ಹಣ ಇಲ್ಲದ ಕಾರಣ ಸೆಹೋರ್ ಜಿಲ್ಲೆಯ  ಬಸಂತ್’ಪುರ ಗ್ರಾಮದ ಸರ್ದಾರ್ ಕಾಹ್ಲಾ ಎಂಬ ರೈತ ಎತ್ತುಗಳ ಬದಲಿಗೆ ತನ್ನಿಬ್ಬರು ಹೆಣ್ಮಕ್ಕಳು- ರಾಧಿಕಾ (14) ಹಾಗೂ ಕುಂತಿ  (11)- ಬಳಸಿಕೊಂಡು ಹೊಲ ಉಳುಮೆ ಮಾಡಿದ್ದಾನೆ.

ಎತ್ತು ಖರೀದಿಸುವಷ್ಟು ನನ್ನಲ್ಲಿ ಹಣವಿಲ್ಲ. ಆರ್ಥಿಕ ತೊಂದರೆಯಿಂದಾಗಿ ನನ್ನಿಬ್ಬರು ಮಕ್ಕಳು ಶಾಲೆಯನ್ನೇ ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ ಎಂದು ಕಾಹ್ಲಾ ಹೇಳಿದ್ದಾನೆ.

ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಸರ್ಕಾರಿ ಯೋಜನೆಯಡಿ ನೆರವು ಒದಗಿಸಲಾಗುವುದೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಲ ಉಳುವ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳಬಾರದೆಂದು ತನಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

(ಚಿತ್ರ: ಏಎನ್ಐ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!