ಮಧ್ಯಪ್ರದೇಶ ಪೊಲೀಸರಿಂದ ಪ್ರತಿಭಟನಾಕಾರ ರೈತರ ಶೂಟೌಟ್?

Published : Jul 17, 2018, 01:08 PM ISTUpdated : Jul 17, 2018, 01:09 PM IST
ಮಧ್ಯಪ್ರದೇಶ ಪೊಲೀಸರಿಂದ ಪ್ರತಿಭಟನಾಕಾರ ರೈತರ ಶೂಟೌಟ್?

ಸಾರಾಂಶ

ಬಿಜೆಪಿ ಆಡಳಿತ ಪಕ್ಷವಿರುವ ಮಧ್ಯ ಪ್ರದೇಶದ ಮಂಡ್‌ಸೌರ್‌ನಲ್ಲಿ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ವಿಡಿಯೋವೊಂದನ್ನು ಪೋಸ್ಟ್ ಮಾಡಿ ‘ಜಲಿಯನ್ ವಾಲಾಬಾಗ್ ಘಟನೆ ಮತ್ತೆ ಪುನರಾವರ್ತನೆಯಾಗುತ್ತಿದೆ.

ಭೂಪಾಲ್ (ಜು. 17):  ಮಧ್ಯಪ್ರದೇಶ  ಬಿಜೆಪಿ ಆಡಳಿತ ಪಕ್ಷವಿರುವ ಮಧ್ಯ ಪ್ರದೇಶದ ಮಂಡ್‌ಸೌರ್‌ನಲ್ಲಿ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ವಿಡಿಯೋವೊಂದನ್ನು ಪೋಸ್ಟ್ ಮಾಡಿ ‘ಜಲಿಯನ್ ವಾಲಾಬಾಗ್ ಘಟನೆ ಮತ್ತೆ ಪುನರಾವರ್ತನೆಯಾಗುತ್ತಿದೆ. ಪ್ರತಿಭಟನಾಗಾರರು ಬೇಡಿಕೆ ಈಡೇರಿಕೆಗಾಗಿ ಪ್ರತಿಭಟಿಸುತ್ತಿರುವಾಗ ಪೊಲೀಸರು ನಿರ್ದಯವಾಗಿ ಗುಂಡಿಟ್ಟಿದ್ದಾರೆ’ ಎಂಬ ಒಕ್ಕಣೆಯನ್ನು ಬರೆದಿದ್ದಾರೆ. ಜೊತೆಗೆ ‘ಪೊಲೀಸರು ಆ ಇಬ್ಬರು ಗಾಯಾಳುಗಳನ್ನು ಆ್ಯಂಬುಲೆನ್ಸ್‌ನಲ್ಲಿ ಕೊಡೊಯ್ದರು’ ಎಂದೂ ಕೂಡ ಹೇಳಲಾಗಿದೆ.

ವಿಡಿಯೋ ನೋಡಿದ ಹಲವರು ಮಧ್ಯಪ್ರದೇಶದ ಮುಖ್ಯಮಂತ್ರಿ, ಸಂಸದರು ಹಾಗೂ ಪೊಲೀಸರನ್ನು ಆಪಾದಿಸಿದ್ದರೆ. ಕೆಲವರು ಈ ವಿಡಿಯೋವನ್ನು ಶೇರ್ ಮಾಡಿ, ‘ಮೋದಿ ಸರ್ಕಾರದಲ್ಲಿ ನಮ್ಮ ಹಕ್ಕಿನ ವಿರುದ್ಧ ಧ್ವನಿ ಎತ್ತುವಂತೆಯೂ ಇಲ್ಲ. ಇದೇ ರೀತಿ ಹಲವು ಪ್ರಕರಣಗಳು ನಡೆದಿವೆ. ಸರ್ಕಾರ ಹಿಟ್ಲರ್‌ನಂತೆ ವರ್ತಿಸುತ್ತಿದೆ. ಭಾರತ ಇಂದು ಹಿಟ್ಲರ್ ಆಳ್ವಿಕೆಗೆ ಒಳಪಟ್ಟಿದೆ’ ಎಂದು ಅಡಿಟಿಪ್ಪಣಿ ಬರೆದು ಶೇರ್ ಮಾಡಿದ್ದಾರೆ. ಆದರೆ ನಿಜಕ್ಕೂ ಪ್ರತಿಭಟನೆ ವೇಳೆ ಪೊಲೀಸರು ಗುಂಡು ಹಾರಿಸಿ ಮಧ್ಯಪ್ರದೇಶದ ಇಬ್ಬರು ರೈತರು ಮೃತಪಟ್ಟಿದ್ದರೇ ಎಂದು ಹುಡಕ ಹೊರಟಾಗ ಇದೊಂದು ಸುಳ್ಳು ಆಪಾದನೆ ಎಂಬುದು ಪತ್ತೆಯಾಗಿದೆ.

ವಾಸ್ತವವಾಗಿ ಇದೊಂದು ಅಣಕು ಕವಾಯತು. ಇದರಿಂದ ಯಾರೊಬ್ಬರೂ ಅಸುನೀಗಿಲ್ಲ, ಯಾರಿಗೂ ತೊಂದರೆಯಾಗಿಲ್ಲ. ಈ ವಿಡಿಯೋವನ್ನೂ 2017 ನವೆಂಬರ್ 1 ರಂದು ಮೊದಲು ‘ಮಾಕ್ ಡ್ರಿಲ್ ಆಫ್ ಕುಂತಿ ಪೊಲೀಸ್’ ಎಂಬ ಶೀರ್ಷಿಕೆಯಡಿ ಅಪ್‌ಲೋಡ್ ಮಾಡಲಾಗಿದೆ. 8 ಸೆಕೆಂಡ್ಗಳ ಕವಾಯತಿನ ಬಳಿಕ ಕೆಲ ಪ್ರತಿಭಟನಾಕಾರರು ನಗುತ್ತಿರುವ ಆಡಿಯೋ ಕೇಳಿಸುತ್ತದೆ. ಅಲ್ಲದೆ 44 ಸೆಕೆಂಡ್ಗಳ ಕಾಲ ಪ್ರತಿಭಟನಾಕಾರರು ನಗುತ್ತಾ ನಡೆಯುತ್ತಿರುವ  ದೃಶ್ಯವನ್ನೂ ಇದರಲ್ಲಿ ಕಾಣಬಹುದಾಗಿದೆ. 

-ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ