ಈ ಹಿಂದೆಯೂ ಸರ್ಜಿಕಲ್ ದಾಳಿ ನಡೆದಿವೆ: ನಿವೃತ್ತ ಲೆ.ಜ. ಹೂಡಾ!

By Web DeskFirst Published May 4, 2019, 5:56 PM IST
Highlights

ಭಾರತೀಯ ಸೇನೆಯಿಂದ ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್| 2106ರ ಸರ್ಜಿಕಲ್ ಸ್ಟ್ರೈಕ್ ಹೀರೋ ಲೆ.ಜ.(ನಿವೃತ್ತ) ಡಿಎಸ್ ಹೂಡಾ ಅಭಿಮತ| ‘ಈ ಹಿಂದೆಯೂ ಹಲವು ಬಾರಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ದಾಟಿ ದಾಳಿ ನಡೆಸಿದೆ’| ನಿವೃತ್ತಿ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಡಿಎಸ್ ಹೂಡಾ|

ಜೈಪುರ(ಮೇ.04): ಈ ಹಿಂದೆಯೂ ಹಲವು ಬಾರಿ ಭಾರತೀಯ ಸೇನೆಯಿಂದ ಹಲವು ಬಾರಿ ಸರ್ಜಿಕಲ್ ದಾಳಿ ನಡೆದಿವೆ ಎಂದು 2016ರ ಸರ್ಜಿಕಲ್ ಸ್ಟ್ರೈಕ್ ದಾಳಿಯ ನೇತೃತ್ವ ವಹಿಸಿದ್ದ ಲೆ.ಜ.(ನಿವೃತ್ತ) ಡಿಎಸ್ ಹೂಡಾ ಹೇಳಿದ್ದಾರೆ.

2016ಕ್ಕೂ ಮೊದಲು ಭಾರತೀಯ ಸೇನೆಯಿಂದ ಹಲವು ಬಾರಿ ಸರ್ಜಿಕಲ್ ದಾಳಿ ನಡೆದಿದ್ದು, ದಾಳಿ ನಡೆದ ಪ್ರದೇಶ ಮತ್ತು ದಿನದ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಹೂಡಾ ಸ್ಪಷ್ಟಪಡಿಸಿದ್ದಾರೆ.

Lt General (Retd) DS Hooda on Congress's claim '6 surgical strikes were carried out during UPA tenure: Call it surgical strikes, call it cross border operations, they have been carried out in the past by the Army. I'm not aware of exact dates & areas that have been brought out. pic.twitter.com/5q499OSM9r

— ANI (@ANI)

ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ಸೇನೆ ಹಲವು ಬಾರಿ ದಾಳಿ ನಡೆಸಿದ್ದು, ಈ ಕುರಿತು ಬೆಟಾಲಿಯನ್, ದಳ ಅಥವಾ ವಿಭಾಗೀಯ ಮಟ್ಟದಲ್ಲಿ ಮಾತ್ರ ಮಾಹಿತಿ ಇರುತ್ತದೆ ಎಂದು ಹೂಡಾ ತಿಳಿಸಿದ್ದಾರೆ.

2016ರ ಸರ್ಜಿಕಲ್ ದಾಳಿಯ ನೇತೃತ್ವ ವಹಿಸಿದ್ದ ಲೆ.ಜ.(ನಿವೃತ್ತ) ಡಿಎಸ್ ಹೂಡಾ, ನಿವೃತ್ತಿ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!