
ನವದೆಹಲಿ(ಜು.03): ಸ್ವಿಸ್ ಬ್ಯಾಂಕ್ ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ತೆರಿಗೆ ವಂಚಕರ ಸುರಕ್ಷಿತ ತಾಣ ಸ್ವಿಸ್ ಬ್ಯಾಂಕ್. ಅಚ್ಚರಿ ಎಂದರೆ ಕಳೆದ ಮೂರು ವರ್ಷಗಳಿಂದ ಈ ಬ್ಯಾಂಕ್ನಲ್ಲಿ ಹಣ ತೊಡಗಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆಶ್ಚರ್ಯ ಎನಿಸಿದರೂ ಇದು ಸತ್ಯ
ಕಡಿಮೆಯಾಯ್ತು ಕಳ್ಳಾಟ!
ಕಾಳಧನಿಕರ ಸ್ವರ್ಗ ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯರು ಹಣ ಕೂಡಿಡುವ ಪ್ರಮಾಣ ಕಳೆದ ಮೂರು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಅಧಿಕಾರಕ್ಕೆ ಬಂದ ಕೂಡಲೇ ಸ್ವಿಸ್ ಬ್ಯಾಂಕ್ಗಳಲ್ಲಿರುವ ಕಪ್ಪುಕುಳಗಳ ಹೆಸರನ್ನು ಬಹಿರಂಗಪಡಿಸೋದಾಗಿ ಹೇಳಿದ್ದರು. ಅದರಂತೆ ಕೆಲವರ ಹೆಸರುಗಳನ್ನು ಬಹಿರಂಗ ಪಡಿಸಿದ್ದರು. ಕಾಳಧನಿಕರ ವಿರುದ್ಧ ಮೋದಿ ಚಾಟಿ ಬೀಸುತ್ತಿದ್ದಂತೆ, ಇದೀಗ ಸ್ವಿಸ್ ಬ್ಯಾಂಕ್'ನಲ್ಲಿ ಭಾರತದ ಸ್ಥಾನ 88ಕ್ಕೆ ಕುಸಿದಿದೆ. ಬ್ರಿಟನ್ ಅಗ್ರಸ್ಥಾನಕ್ಕೇರಿದೆ.
ಮೊನ್ನೆಯಷ್ಟೇ ಪ್ರಧಾನಿ ಮೋದಿ ಅವರು, ದೆಹಲಿಯಲ್ಲಿ ನಡೆದ ಇನ್ಸಿಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸ್ ನ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರು ಬಚ್ಚಿಡುತ್ತಿರುವ ಹಣದ ಪ್ರಮಾಣ ಗಣನೀಯವಾಗಿ ಇಳಿಮುಖ ಕಂಡಿದೆ ಎಂದು ಹೇಳಿದ್ದರು.
ಇನ್ನು ಪ್ರಸ್ತುತ ಸ್ವಿಸ್ ಬ್ಯಾಂಕ್ ಗಳಲ್ಲಿರುವ ಒಟ್ಟು ವಿದೇಶಿ ಹಣದ ಪೈಕಿ ಭಾರತೀಯರ ಹಣ ಶೇ0.04ಕ್ಕೆ ಕುಸಿದಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ ಬಿಡುಗಡೆ ಮಾಡಿದ 2016ರ ಅಂತ್ಯದ ವರದಿ ತಿಳಿಸಿದೆ.
2015ರಲ್ಲಿ ಸ್ವಿಸ್ ಬ್ಯಾಂಕ್ಗಳಲ್ಲಿ ಹಣ ಕೂಡಿಟ್ಟವರ ಪಟ್ಟಿಯಲ್ಲಿ ಭಾರತ 75ನೇ ಸ್ಥಾನದಲ್ಲಿತ್ತು. ಅದಕ್ಕೂ ಮುಂಚೆ 61ನೇ ಸ್ಥಾನದಲ್ಲಿತ್ತು. 2007ರಲ್ಲಿ ಭಾರತ ಟಾಪ್ 50 ದೇಶಗಳ ಪಟ್ಟಿಯಲ್ಲಿತ್ತು. 2004ರಲ್ಲಿ ಭಾರತ 37ನೇ ಸ್ಥಾನದಲ್ಲಿತ್ತು. ಹೀಗೆ ವರ್ಷದಿಂದ ವರ್ಷಕ್ಕೆ ಕಾಳಧನಿಕ ಸಂಖ್ಯೆ ಕಡಿಮೆಯಾಗುತ್ತಿತ್ತು . ಕಪ್ಪು ಹಣದ ಪಿಡುಗನ್ನು ಬೇರು ಸಮೇತ ಕಿತ್ತೊಗೆಯೋದಾಗಿ ಪಣ ತೊಟ್ಟಿದ್ದ ಪ್ರಧಾನಿ ಮೋದಿ ಅವರ ಕನಸು ನನಸಾಗುತ್ತಿದೆ ಎಂದರೆ ತಪ್ಪಾಗಲಾರದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.