
ನವದೆಹಲಿ: ಸಬ್ಸಿಡಿರಹಿತ ಅಡುಗೆ ಅನಿಲದ ಬೆಲೆ ಬರೋಬ್ಬರಿ 93 ರೂಪಾಯಿ ಏರಿಕೆ ಆಗಿದೆ. ಗ್ಯಾಸ್ ಸಬ್ಸಿಡಿ ಪೂರ್ಣವಾಗಿ ರದ್ದುಗೊಳಿಸುವ ತನ್ನ ಅಂತಿಮ ಗುರಿಯತ್ತ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸಬ್ಸಿಡಿಯುಕ್ತ ಅಡುಗೆ ಅನಿಲದ ಬೆಲೆಯನ್ನೂ ಸ್ವಲ್ಪ ಏರಿಕೆ ಮಾಡಿದೆ. ನಿನ್ನೆ ಸಬ್ಸಿಡಿಸಹಿತ ಗ್ಯಾಸ್ ಸಿಲಿಂಡರ್ ಬಲೆ 4.60 ರೂ ಏರಿಕೆ ಮಾಡಲಾಗಿದೆ.
ಸಬ್ಸಿಡಿಸಹಿತ 14.2 ಕಿಲೋ ಎಲ್'ಪಿಜಿ ಸಿಲಿಂಡರ್'ನ ಬೆಲೆಯು ರಾಜಧಾನಿ ದೆಹಲಿಯಲ್ಲಿ ಈಗ 495.69 ಆಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ 486.50 ರೂ'ಗೆ ಏರಿಕೆಯಾಗಿದೆ.
ಸಬ್ಸಿಡಿರಹಿತ ಸಿಲಿಂಡರ್'ಗಳ ಬೆಲೆ ದಿಲ್ಲಿಯಲ್ಲಿ 742 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಇದರ ಬೆಲೆ 744.50 ರೂಪಾಯಿ ಆಗಿದೆ.
ಭಾರತದಲ್ಲಿ ಎಲ್'ಪಿಜಿ ಗ್ಯಾಸ್'ಗೆ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರ ಸಂಖ್ಯೆ 18.11 ಕೋಟಿ ಇದೆ. ಸಬ್ಸಿಡಿ ಇಲ್ಲದ ಗ್ರಾಹಕರ ಪ್ರಮಾಣ 2.66 ಕೋಟಿ ಇದೆ. ಸಬ್ಸಿಡಿ ಮತ್ತು ನಾನ್-ಸಬ್ಸಿಡಿ ಬೆಲೆಗಳ ನಡುವಿನ ಅಂತರ ಈಗ ಇನ್ನಷ್ಟು ತಗ್ಗಿದೆ. 2018ರ ಮಾರ್ಚ್'ನಷ್ಟರಲ್ಲಿ ಎಲ್'ಪಿಜಿ ಸಬ್ಸಿಡಿಯನ್ನು ಪೂರ್ಣವಾಗಿ ನಿಲ್ಲಿಸುವ ಗುರಿ ಕೇಂದ್ರ ಸರಕಾರದ್ದಾಗಿದೆ. ಸದ್ಯಕ್ಕೆ ಒಬ್ಬ ಎಲ್'ಪಿಜಿ ಗ್ರಾಹಕರಿಗೆ ಪ್ರತೀ ವರ್ಷ 14.2 ಕಿಲೋ ತೂಕದ 12 ಗ್ಯಾಸ್ ಸಿಲೆಂಡರ್'ಗಳನ್ನು ಸಬ್ಸಿಡಿ ದರದಲ್ಲಿ ಕೊಡಲಾಗುತ್ತದೆ. ಹೆಚ್ಚುವರಿ ಸಿಲಿಂಡರ್'ಗಳಿಗೆ ಸಬ್ಸಿಡಿರಹಿತ (ಕಮರ್ಷಿಯಲ್) ದರ ವಿಧಿಸಲಾಗುತ್ತಿದೆ.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.