ಇ-ಮೇಲ್‌ ಯುಗದಲ್ಲೂ ಅಂಚೆಪತ್ರದ ಗಮ್ಮತ್ತು!: ಅಂಚೆ ಕಾರ್ಡ್‌ ಮೇಲಿನ ಪ್ರೀತಿ ಅಗಾಧ

Published : Jul 29, 2019, 08:29 AM ISTUpdated : Jul 29, 2019, 08:30 AM IST
ಇ-ಮೇಲ್‌ ಯುಗದಲ್ಲೂ ಅಂಚೆಪತ್ರದ ಗಮ್ಮತ್ತು!: ಅಂಚೆ ಕಾರ್ಡ್‌ ಮೇಲಿನ ಪ್ರೀತಿ ಅಗಾಧ

ಸಾರಾಂಶ

ಇ-ಮೇಲ್‌ ಯುಗದಲ್ಲೂ ಕಮ್ಮಿಯಾಗಿಲ್ಲ ಅಂಚೆಪತ್ರ| -2017-18ರ ಸಾಲಿನಲ್ಲಿ 106.23 ಕೋಟಿ ಅಂಚೆ ಕಾರ್ಡ್‌ ಮಾರಾಟ| ಬಂಧುಗಳು, ಅಧಿಕೃತ ಸಂವಹನಕ್ಕೆ ಅಂಚೆ ಪತ್ರವೇ ಮಾಧ್ಯಮ

ನವದೆಹಲಿ[ಜು.29]: ಈಗಿನ ಯುವ ಸಮುದಾಯ ತಮ್ಮ ಯಾವುದೇ ಅಭಿಪ್ರಾಯ, ಭಿನ್ನಾಭಿಪ್ರಾಯ ಸೇರಿದಂತೆ ಇನ್ನಿತರ ವಿಚಾರಗಳನ್ನು ವಾಟ್ಸಾಪ್‌, ಫೇಸ್‌ಬುಕ್‌ ವಾಲ್‌ಗಳಲ್ಲಿ ಪೋಸ್ಟ್‌ ಮಾಡುವುದು ಗೊತ್ತೇ ಇದೆ. ಆದರೆ, ಇ-ಮೇಲ್‌ ಸೇರಿದಂತೆ ಇನ್ನಿತರ ಡಿಜಿಟಲ್‌ ಸಂವಹನ ಯುಗವಾದ ಪ್ರಸ್ತುತ ಸಂದರ್ಭದಲ್ಲಿಯೂ ಸಾರ್ವಜನಿಕರಿಗೆ 50 ಪೈಸೆಯ ಅಂಚೆ ಕಾರ್ಡ್‌ ಮೇಲಿನ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ.

ಇತ್ತೀಚಿನ ಭಾರತೀಯ ಅಂಚೆ ಕಚೇರಿ ದಾಖಲೆ ಪ್ರಕಾರ, 2016-17ರಲ್ಲಿ 99.89 ಕೋಟಿ ಇದ್ದ ಅಂಚೆ ಪತ್ರಗಳ ಮಾರಾಟ ಸಂಖ್ಯೆ 2017-18ನೇ ಸಾಲಿನಲ್ಲಿ 106.23 ಕೋಟಿಗೆ ಏರಿಕೆಯಾಗಿದೆ. ಈ ಏರಿಕೆಗೆ ಮುಖ್ಯಕಾರಣ, ಗ್ರಾಮೀಣ ಭಾಗಗಳಲ್ಲಿ ಈಗಲೂ ಅಂಚೆ ಪತ್ರ ಬಳಕೆ ಮುಂದುವರೆದಿರುವುದು. ಅದರ ಜೊತೆಗೆ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ನಾಯಕರು ವಿವಿಧ ಉದ್ದೇಶಗಳನ್ನು ಮುಂದಿಟ್ಟುಕೊಂಡು ನಡೆಸುವ ಅಂಚೆ ಪತ್ರ ಅಭಿಯಾನ. ಇಂಥ ಅಭಿಯಾನಗಳಿಗೆ ಭಾರೀ ಪ್ರಮಾಣದ ಅಂಚೆ ಕಾರ್ಡ್‌ಗಳು ಬಳಕೆಯಾಗುತ್ತಿರುವ ಕಾರಣ ಅಂಚೆಕಾರ್ಡ್‌ಗಳ ಮಾರಾಟದಲ್ಲಿ ವರ್ಷವರ್ಷ ಏರಿಕೆ ಆಗುತ್ತಲೇ ಇದೆ.

ಆದರೆ 50 ಪೈಸೆಯ ಒಂದು ಅಂಚೆ ಕಾರ್ಡ್‌ನಿಂದ ಅಂಚೆ ಇಲಾಖೆ 7 ರುಪಾಯಿಗಿಂತಲೂ ಹೆಚ್ಚು ನಷ್ಟಅನುಭವಿಸುತ್ತಿದೆ. ಜನಸಾಮಾನ್ಯರಿಗೂ ಸುಲಭವಾಗಿ ಅಂಚೆ ಸೌಲಭ್ಯ ಸಿಗಬೇಕೆಂಬ ಕಾರಣಕ್ಕೆ ಇಂದಿಗೂ ಅಂಚೆ ಇಲಾಖೆ ಈ ಕಾರ್ಡ್‌ಗಳ ಸೇವೆ ಉಳಿಸಿಕೊಂಡಿದೆ. ಆದರೆ ಇವುಗಳನ್ನು ನಿಗದಿತ ಉದ್ದೇಶ ಬಿಟ್ಟು ಬಿಟ್ಟು ಬೇರೆ ಬೇರೆ ಕಾರಣಕ್ಕೆ ಬಳಸುತ್ತಿರುವ ಕಾರಣ, ಅಂಚೆ ಇಲಾಖೆ ಪ್ರತಿ ವರ್ಷ ಕೋಟ್ಯಂತರ ರುಪಾಯಿ ನಷ್ಟಅನುಭವಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?
Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!