
ನವದೆಹಲಿ[ಮೇ.25]: ಲೋಕಸಭೆಗೆ ಈ ಬಾರಿ 27 ಮುಸ್ಲಿಂ ಸದಸ್ಯರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಲೋಕಸಭೆಯಲ್ಲಿ 23 ಮುಸ್ಲಿಂ ಸದಸ್ಯರಿದ್ದರು. ಅಂದರೆ ಕಳೆದ ಬಾರಿಗಿಂತ 4 ಸದಸ್ಯರು ಹೆಚ್ಚಾಗಿದ್ದಾರೆ.
ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ 6, ಕೇರಳ, ಜಮ್ಮು- ಕಾಶ್ಮೀರದಿಂದ ತಲಾ 3, ಆಸ್ಸಾಂ, ಬಿಹಾರದಿಂದ ತಲಾ 2, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು, ಲಕ್ಷದ್ವೀಪ ಮತ್ತು ತೆಲಂಗಾಣದಿಂದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಪಕ್ಷವಾರು ಟಿಎಂಸಿಯಿಂದ 5, ಕಾಂಗ್ರೆಸ್‌ನ 4, ಎಸ್ಪಿ, ಬಿಎಸ್ಪಿ, ನ್ಯಾಷನಲ್ ಕಾಂಗ್ರೆಸ್ ಮತ್ತು ಐಯುಎಂಎಲ್ ತಲಾ 3, ಎಐಎಂಐಎಂನ 2 ಸಂಸದರಿದ್ದಾರೆ. ಎಲ್‌ಜೆಪಿ, ಎನ್‌ಸಿಪಿ, ಸಿಪಿಐ(ಎಂ) ಮತ್ತು ಎಐಯುಡಿಎಫ್‌ನ ತಲಾ ಒಬ್ಬ ಮುಸ್ಲಿಂ ಸಂಸದರಿದ್ದಾರೆ.
1980ರಲ್ಲಿ ಅತಿ ಹೆಚ್ಚು ಅಂದರೆ 49 ಮುಸ್ಲಿಂ ಸಂಸದರು, 1952ರಲ್ಲಿ ಅತಿ ಕಡಿಮೆ ಎಂದರೆ 11 ಮುಸ್ಲಿಂ ಸಂಸದರಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಜಮ್ಮು ಮತ್ತು ಕಾಶ್ಮೀರದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 2 ಮತ್ತು ಲಕ್ಷದ್ವೀಪದಲ್ಲಿ ಒಬ್ಬರು ಹೀಗೆ ಆರು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ಆ ಪೈಕಿ ಯಾರೊಬ್ಬರೂ ಗೆದ್ದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.