1 ತಿಂಗಳಲ್ಲಿ 157 ಯೋಜನೆ ಉದ್ಘಾಟಿಸಿದ ಮೋದಿ!

By Web DeskFirst Published Mar 11, 2019, 7:41 AM IST
Highlights

1 ತಿಂಗಳಲ್ಲಿ 157 ಯೋಜನೆ ಉದ್ಘಾಟಿಸಿದ ಮೋದಿ!| 1 ತಿಂಗಳ ಅವಧಿಯಲ್ಲಿ ದೇಶವ್ಯಾಪಿ 28 ಪ್ರವಾಸ

ನವದೆಹಲಿ[ಮಾ.11]: ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುವುದಕ್ಕೂ ಮುಂಚೆ ಒಂದು ತಿಂಗಳಲ್ಲಿ ಅಭೂತಪೂರ್ವ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 157 ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

ಜನವರಿ 8ರಿಂದ ಫೆಬ್ರವರಿ 8ರ ನಡುವೆ 57 ಯೋಜನೆಗಳನ್ನು ಉದ್ಘಾಟಿಸಿದ್ದ ಮೋದಿ, ಫೆಬ್ರವರಿ 8ರಿಂದ ಮಾಚ್‌ರ್‍ 9ರ ನಡುವೆ 157 ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅವರು ದೇಶಾದ್ಯಂತ 28 ಪ್ರವಾಸಗಳನ್ನು ಕೈಗೊಂಡಿದ್ದಾರೆ. ಅವರು ಉದ್ಘಾಟಿಸಿದ ಯೋಜನೆಗಳಲ್ಲಿ ಹೆದ್ದಾರಿಗಳು, ರೈಲ್ವೆ ಮಾರ್ಗಗಳು, ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು, ಶಾಲೆಗಳು, ಗ್ಯಾಸ್‌ ಪೈಪ್‌ಲೈನ್‌, ವಿಮಾನ ನಿಲ್ದಾಣ, ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ, ವಿದ್ಯುತ್‌ ಘಟಕ ಹೀಗೆ ನಾನಾ ಯೋಜನೆಗಳು ಸೇರಿವೆ. ಪ್ರಧಾನಿ ಕಚೇರಿಯ ಅಧಿಕೃತ ವೆಬ್‌ಸೈಟ್‌ ಹಾಗೂ ಅವರ ಪ್ರವಾಸದ ಪ್ರಕಟಣೆಗಳನ್ನು ಆಧರಿಸಿ ಎನ್‌ಡಿಟೀವಿ ಈ ಮಾಹಿತಿಯನ್ನು ಕ್ರೋಢೀಕರಿಸಿದೆ.

ಚುನಾವಣೆಯ ದಿನಾಂಕ ಘೋಷಣೆಯಾದ ತಕ್ಷಣ ದೇಶಾದ್ಯಂತ ನೀತಿಸಂಹಿತೆ ಜಾರಿಗೆ ಬರುತ್ತದೆ. ಆಗ ಹೊಸ ಯೋಜನೆಗಳನ್ನು ಉದ್ಘಾಟಿಸುವುದು ಅಥವಾ ಘೋಷಿಸುವುದಕ್ಕೆ ತಡೆ ಬೀಳುತ್ತದೆ. ಹೀಗಾಗಿ ಕೊನೆ ಕ್ಷಣದಲ್ಲಿ ಮೋದಿ ಸಾಕಷ್ಟುಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, 2014ರ ಚುನಾವಣೆಗೂ ಮುಂಚಿನ ಒಂದು ತಿಂಗಳ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರು ಒಂದೇ ಒಂದು ಪ್ರವಾಸವನ್ನೂ ಮಾಡಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

click me!