
ಕೋಲಾರ[ಮಾ. 06] ಮುಳಬಾಗಿಲುನಲ್ಲಿ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಬಾಂಬ್ ಸಿಡಿಸಿದ್ದಾರೆ. ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದರೆ ,ಸಂಸದ ಕೆ. ಎಚ್.ಮುನಿಯಪ್ಪ ರಹಸ್ಯ ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಆವಣಿ ಜಾತ್ರೆ ಯಲ್ಲಿ ಭಾಗವಹಿಸಿದ್ದ ಮಂಜುನಾಥ್ ಮುನಿಯಪ್ಪ ಅವರ ಮೇಲೆ ವಾಗ್ದಾಳಿ ಮಾಡಿದರು. ಮುನಿಯಪ್ಪರ ಮತ್ತೊಂದು ಮುಖವಾಡ ಕ್ಷೇತ್ರದ ಜನರ ಮುಂದೆ ಬಯಲು ಮಾಡುತ್ತೇನೆ. ನಾನು ಒಬ್ಬರಿಗೆ ತೊಂದರೆ ಕೊಡುವುದಿಲ್ಲ, ಆದ್ರೆ ಮುನಿಯಪ್ಪ ಯಾವ ರೀತಿ ತೊಂದರೆ ನೀಡಿದ್ದಾರೆ ಎನ್ನುವುದು ಜನರಿಗೆ ಗೊತ್ತು. ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ವಿರುದ್ಧ ಕೆಲಸ ಮಾಡುವೆ ಎಂದು ಹೇಳಿದರು.
ಲೋಕ ಅಖಾಡಕ್ಕೆ ಜಯಮಾಲಾ, ಯಾರ ವಿರುದ್ಧ ಸ್ಪರ್ಧೆ?
ತಮ್ಮ ಜಾತಿ ಪ್ರಮಾಣ ಪತ್ರ ದೋಷ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ಇದೆ. ಇನ್ನೂ ಸ್ಟೇ ಸಿಗುವುದು ವಿಳಂಬ, ಸ್ಟೇ ಸಿಕ್ಕರೇ ಕ್ಷೇತ್ರದ ಮುಖಂಡರ ಜೊತೆ ಮಾತನಾಡಿ ಸ್ಪರ್ಧೆ ಮಾಡುತ್ತೇನೆ. ಸದ್ಯಕ್ಕೆ ಆ ಆಲೋಚನೆ ಇಲ್ಲ, ಯಾರು ಉತ್ತಮ ಗುಣವಂತರು ಅವರಗೆ ಬೆಂಬಲ ನೀಡುತ್ತೇನೆ ಎಂದರು.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.