
ನವದೆಹಲಿ: ಇನ್ನು ಲೋಕಸಭೆ ಸದಸ್ಯರು ಒಂದು ದಿನಕ್ಕೆ ಕೇವಲ 5 ಪ್ರಶ್ನೆಗಳನ್ನು ಮಾತ್ರ ಕೇಳಲು ಸಾಧ್ಯ. ಶೀಘ್ರದಲ್ಲೇ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.
ದಿನಕ್ಕೆ ಈವರೆಗೆ 10 ಪ್ರಶ್ನೆಗಳನ್ನು ಕೇಳಲು ಅವಕಾಶವಿತ್ತು. ಆದರೆ ನಿಯಮವನ್ನು ನಿಯಮ 10ಬಿ ಅನ್ವಯ ಬದಲಿಸಲಾಗಿದ್ದು, ದಿನಕ್ಕೆ 10ರ ಬದಲು 5 ಪ್ರಶ್ನೆಗಳನ್ನು ಕೇಳಲು ಮಾತ್ರ ನೋಟಿಸ್ ನೀಡಬಹುದು ಎಂದು ತಿಳಿಸಲಾಗಿದೆ. ದಿನಕ್ಕೆ 10 ಪ್ರಶ್ನೆ ಕೇಳಲು ಅವಕಾಶವಿರುತ್ತಿದ್ದ ಕಾರಣ ನಿತ್ಯ 230 ಪ್ರಶ್ನೆಗಳನ್ನು (ಸರಾಸರಿ) ಕೇಳಲಾಗುತ್ತಿತ್ತು.
ಇದು ತುಂಬಾ ಹೊರೆ ಎನ್ನಿಸುತ್ತಿತ್ತು. ಹೀಗಾಗಿ 5 ಪ್ರಶ್ನೆಗೆ ಮಿತಿ ಸೀಮಿತ ಮಾಡಲಾಗಿದೆ. ಒಂದು ವೇಳೆ ಪ್ರಶ್ನೆ ಕೇಳಿದ ದಿನ ಉತ್ತರ ಲಭಿಸದಿದ್ದರೆ ಮಾರನೇ ದಿವಸ ಉತ್ತರ ಲಭಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.