ಕಾಂಗ್ರೆಸ್ ನಾಯಕರಿಗೆ ಹೊಸ ಹೊಣೆಗಾರಿಕೆ

By Web DeskFirst Published Sep 16, 2018, 11:09 AM IST
Highlights

ವಿವಿಧ ರಾಜಕೀಯ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಇದೀಗ ಕಾಂಗ್ರೆಸ್ ಮುಖಂಡರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೂತನ ಜವಾಬ್ದಾರಿ ನೀಡಿದ್ದಾರೆ. 

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿವಿಧ ಹೊಣೆಗಾರಿಕೆ ಗಳನ್ನು ವಹಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಪ್ರಣಾ ಳಿಕೆ ಸಮಿತಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ರುವ ಅವರು, ಕರ್ನಾಟಕದ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಅವರನ್ನು ಸಂಚಾಲಕರನ್ನಾಗಿ ನೇಮಿ ಸಿದ್ದಾರೆ. 

ವಿವಿಧ ಪಕ್ಷಗಳ ಜತೆ ಸಮನ್ವಯತೆ ಸಾಧಿಸಲು ಸಮನ್ವಯ ಸಮಿತಿಯೊಂದನ್ನು ರಚಿಸಿದ್ದು, ಎ.ಕೆ. ಆ್ಯಂಟನಿ ಮುಖ್ಯಸ್ಥ ಹಾಗೂ ಕರ್ನಾಟಕದ ಜೈರಾಮ್ ರಮೇಶ್ ಸಂಚಾಲಕರಾಗಿದ್ದಾರೆ. ಪ್ರಚಾರ ಸಮಿತಿಗೆ ಆನಂದ ಶರ್ಮಾ ಅಧ್ಯಕ್ಷರಾಗಿದ್ದು, ಪವನ್ ಖೇರಾ ಅವರು ಸಂಚಾಲಕರಾಗಿ ನೇಮಕಗೊಂಡಿದ್ದಾರೆ. 

ಕಳೆದ ತಿಂಗಳು ಪ್ರಚಾರ  ಸಮಿತಿ, ಕೋರ್ ಕಮಿಟಿ ಹಾಗೂ ಪ್ರಣಾಳಿಕೆ ಸಮಿತಿ ಗಳನ್ನು ರಾಹುಲ್ ರಚಿಸಿದ್ದರು. ಮಲ್ಲಿಕಾರ್ಜುನ ಖರ್ಗೆ, ರಮ್ಯಾ, ರಾಜೀವ್ ಗೌಡ, ಜೈರಾಂ ರಮೇಶ್ ಸೇರಿದಂತೆ ಹಲವರನ್ನು ನೇಮಕ ಮಾಡಿದ್ದರು. ಈಗ ಅವುಗಳ ಮುಖ್ಯಸ್ಥ ಹಾಗೂ ಸಂಚಾಲಕ ಹುದ್ದೆಗೆ ನೇಮಕಗಳನ್ನು ಮಾಡಿದ್ದಾರೆ.

click me!