ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್‌ಗಳು..!

First Published Jun 2, 2018, 1:12 PM IST
Highlights

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತ್ತೀಯ ನೀತಿ ಸಮಿತಿ(ಎಂಪಿಸಿ) ನಿರ್ಧಾರದ ಹಿನ್ನೆಲೆಯಲ್ಲಿ, ಹಲವು ಬ್ಯಾಂಕ್ ಗಳು ತಮ್ಮ ಬಡ್ಡಿದರವನ್ನು ಹೆಚ್ಚಳ ಮಾಡಿವೆ. 10 ಆಧಾರದ ಅಂಕಗಳನ್ನು (100 ಬಿಪಿಎಸ್ = 1 ಶೇಕಡಾವಾರು ಪಾಯಿಂಟ್)ಗೆ ಈ ಬ್ಯಾಂಕ್‌ಗಳು ಹೆಚ್ಚಿಸಿವೆ.

ಮುಂಬೈ(ಜೂ.2): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತ್ತೀಯ ನೀತಿ ಸಮಿತಿ(ಎಂಪಿಸಿ) ನಿರ್ಧಾರದ ಹಿನ್ನೆಲೆಯಲ್ಲಿ, ಹಲವು ಬ್ಯಾಂಕ್ ಗಳು ತಮ್ಮ ಬಡ್ಡಿದರವನ್ನು ಹೆಚ್ಚಳ ಮಾಡಿವೆ. 10 ಆಧಾರದ ಅಂಕಗಳನ್ನು (100 ಬಿಪಿಎಸ್ = 1 ಶೇಕಡಾವಾರು ಪಾಯಿಂಟ್)ಗೆ ಈ ಬ್ಯಾಂಕ್‌ಗಳು ಹೆಚ್ಚಿಸಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಕೋಟಾಕ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನ ಬ್ಯಾಂಕ್‌ಗಳು ತಮ್ಮ ಬಡ್ಡಿದರ ಹೆಚ್ಚಿಸಿವೆ.

ಸಾಲದ ಕನಿಷ್ಠ ದರವನ್ನು ಪ್ರತಿ ತಿಂಗಳು ಬ್ಯಾಂಕ್‌ಗಳು ಪರಿಶೀಲಿಸುತ್ತವೆ. ಅಲ್ಲದೇ ಹಣದ ವೆಚ್ಚವನ್ನು ಕೂಡ ಪ್ರತಿಬಿಂಬಿಸುತ್ತವೆ. ಇತ್ತೀಚಿನ ಹೆಚ್ಚಳದ ನಂತರ ಎಸ್‌ಬಿಐ ಒಂದು ವರ್ಷದ ಎಂಸಿಎಲ್ ಆರ್ ನ್ನು ಶೇ. 8.25ಹೆ ಹೆಚ್ಚಿಸಿದೆ. 2018ರಲ್ಲಿ ಎಸ್‌ಬಿಐ ಎರಡು ಬಾರಿ ದರ ಹೆಚ್ಚಳ ಮಾಡಿದೆ. ಹೆಚ್‌ಡಿಎಫ್‌ಸಿ ಕೂಡ ತನ್ನ ಚಿಲ್ಲರೆ ಸಾಲ ದರವನ್ನು ಹೆಚ್ಚಿಸಿದೆ .

 ಐಸಿಐಸಿಐ ಬ್ಯಾಂಕ್ ತನ್ನ ಒಂದು ವರ್ಷದ ಎಂಸಿಎಲ್ಆರ್‌ನ್ನು 8.40 ಬಿಪಿಎಸ್‌ನಿಂದ 10 ಬಿಪಿಎಸ್ ಗೆ ಏರಿಸಿದೆ.

click me!