ದೆಹಲಿ ನಿವಾಸಿಗಳಿಗೆ ಉಚಿತ ರೇಡಿಯೋಲಜಿ ಪರೀಕ್ಷೆ!

By Suvarna Web DeskFirst Published Mar 2, 2017, 10:20 AM IST
Highlights

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ರಾಂತಿಕಾರಿ ಕಲ್ಯಾಣ ಯೋಜನೆಯೊಂದನ್ನು ಘೋಷಿಸಿದ್ದಾರೆ. ದೆಹಲಿ ನಿವಾಸಿಗಳಿಗೆ ಉಚಿತ ರೇಡಿಯೋಲಜಿ ಪರೀಕ್ಷೆ ನಡೆಸುವುದಾಗಿ ಹೇಳಿದ್ದಾರೆ. 

ನವದೆಹಲಿ (ಮಾ.02): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ರಾಂತಿಕಾರಿ ಕಲ್ಯಾಣ ಯೋಜನೆಯೊಂದನ್ನು ಘೋಷಿಸಿದ್ದಾರೆ. ದೆಹಲಿ ನಿವಾಸಿಗಳಿಗೆ ಉಚಿತ ರೇಡಿಯೋಲಜಿ ಪರೀಕ್ಷೆ ನಡೆಸುವುದಾಗಿ ಹೇಳಿದ್ದಾರೆ. 

ದೆಹಲಿ ಜನತೆಗೆ ಕೈಗೆಟಕುವಂತೆ ಹಾಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.

Latest Videos

ಎಂಆರ್ ಐ, ಸಿಟಿ, ಪಿಇಟಿ ಸ್ಕ್ಯಾನ್ ಮತ್ತು ಅಲ್ಟ್ರಾ ಸೌಂಡ್ ಸೇರಿದಂತೆ ಎಲ್ಲಾ ರೀತಿಯ ರೆಡಿಯೋಲಜಿ ಪರೀಕ್ಷೆಯನ್ನು ಉಚಿತವಾಗಿ ನಡೆಸುವುದಾಗಿ ದೆಹಲಿ ಸರ್ಕಾರ ಜಾಹಿರಾತು ನೀಡಿದೆ. ಜನರ ಆದಾಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಎಲ್ಲರಿಗೂ ಉಚಿತವಾಗಿ ಈ ಸೇವೆ ನೀಡಲು ಮುಂದಾಗಿದೆ. ಇದೊಂದು ಕ್ರಾಂತಿಕಾಇ ಹೆಜ್ಜೆ ಎಂದು ಸತ್ಯೇಂದರ್ ಜೈನ್ ಹೇಳಿದ್ದಾರೆ.

ಆರೋಗ್ಯ ಇಲಾಖೆ ಗೊತ್ತುಪಡಿಸಿದ 30 ಸರ್ಕಾರಿ ಹಾಗೂ 23 ಪಾಲಿಕ್ಲಿನಿಕ್ ಆಸ್ಪತ್ರೆಯ ವೈದ್ಯರು ಉಲ್ಲೇಖಿಸಿದ ರೋಗಿಗಳು ಸಹ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

 

click me!