ಮುಸ್ಲಿಮರಿಗೆ ಭದ್ರತೆ ಇರುವ ದೇಶಕ್ಕೆ ಹೋಗಿ; ಅನ್ಸಾರಿಗೆ ಆರ್'ಎಸ್'ಎಸ್ ಸಲಹೆ

By Suvarna Web DeskFirst Published Aug 14, 2017, 7:57 AM IST
Highlights

'10 ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿದ್ದ ಅನ್ಸಾರಿ ಅವರು ನಿಜವಾಗಿಯೂ ಜಾತ್ಯತೀತ ವ್ಯಕ್ತಿಯಾಗಿದ್ದರು. ಆದರೆ ಅಧಿಕಾರ ಹಸ್ತಾಂತರದ ಬಳಿಕ ಓರ್ವ ಕಟ್ಟರ್ ಮುಸ್ಲಿಂ ಮತ್ತು ಕಾಂಗ್ರೆಸ್ಸಿಗ ಆದರು'

ನವದೆಹಲಿ(ಆ.14): ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ಕೊನೆಯ ದಿನ ಈ ದೇಶದಲ್ಲಿ ಮುಸ್ಲಿಮರಲ್ಲಿ ಅಭದ್ರತೆಯ ಭಾವ ಆವರಿಸಿಕೊಂಡಿದೆ ಎಂದು ಹೇಳಿದ್ದರು. ಆದರೆ ಈ ಹೇಳಿಕೆಗೆ ಆರ್'ಎಸ್'ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಎಲ್ಲಿ ಸುರಕ್ಷಿತ ದೇಶವಿದೆ ಎಂದೆನಿಸುತ್ತದೆಯೋ ಅಲ್ಲಿಗೆ ಹೋಗಿ ಎಂದು ಅನ್ಸಾರಿ ಅವರಿಗೆ ಇಂದ್ರೇಶ್ ಸಲಹೆ ನೀಡಿದ್ದಾರೆ. ರಾಷ್ಟ್ರೀಯ ಮುಸ್ಲಿಂ ಮಂಚ್ ಆಯೋಜಿಸಿದ್ದ ರಕ್ಷಾ ಬಂಧನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇಂದ್ರೇಶ್ ಕುಮಾರ್, '10 ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿದ್ದ ಅನ್ಸಾರಿ ಅವರು ನಿಜವಾಗಿಯೂ ಜಾತ್ಯತೀತ ವ್ಯಕ್ತಿಯಾಗಿದ್ದರು. ಆದರೆ ಅಧಿಕಾರ ಹಸ್ತಾಂತರದ ಬಳಿಕ ಓರ್ವ ಕಟ್ಟರ್ ಮುಸ್ಲಿಂ ಮತ್ತು ಕಾಂಗ್ರೆಸ್ಸಿಗ ಆದರು' ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos

ವಿಶ್ವದ ಯಾವುದಾದರೊಂದು ರಾಷ್ಟ್ರದಲ್ಲಿ ಮುಸ್ಲೀಮರು ಸುರಕ್ಷಿತರಾಗಿದ್ದಾರೆಯೇ ಎಂಬುದರ ಬಗ್ಗೆ ಅವರು ತಿಳಿಸಬೇಕು. ದೇಶದಲ್ಲಿ ಅವರಿಗೆ ಅಭದ್ರತೆ ಕಾಡುತ್ತದೆ ಎಂದಾದರೆ ಅವರಿಗೆ ಸುರಕ್ಷಿತ ಎಂದೆನಿಸುವ ದೇಶಕ್ಕೆ ಹೋಗಲಿ ಎಂದು ಇಂದ್ರೇಶ್ ಕುಮಾರ್ ಸಲಹೆ ನೀಡಿದ್ದಾರೆ.

click me!