ಟಿಕೆಟ್ ಭಾಗ್ಯ ಇಲ್ಲದ ಹಾಲಿ ಕಾಂಗ್ರೆಸ್ ಶಾಸಕರು ಯಾರಾರು? ಇಲ್ಲಿದೆ ಪಟ್ಟಿ

By Suvarna Web DeskFirst Published Jun 9, 2017, 1:29 PM IST
Highlights

ಮುಂದಿನ ವರ್ಷ ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಣಕ್ಕಿಳಿಯುವ ಕಾಂಗ್ರೆಸ್ ಪಕ್ಷ ಈಗಾಗಲೇ ಗೆಲ್ಲಬಲ್ಲ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಬೂಥ್ ಮಟ್ಟದಲ್ಲಿ ಕಾರ್ಯಕರ್ತರ ಸಲಹೆಗಳನ್ನು ಪಡೆಯುವ ಕಾರ್ಯ ನಡೆದಿದೆ ಎನ್ನಲಾಗಿದೆ.

ಬೆಂಗಳೂರು(ಜೂನ್ 09): ಮಾಜಿ ಸಚಿವ ಅಂಬರೀಶ್, ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ 39 ಹಾಲಿ ಶಾಸಕರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ಕಾಂಗ್ರೆಸ್ ನಿರ್ಧರಿಸಿದೆ ಎಂಬಂತಹ ಸುದ್ದಿ ಕೇಳಿಬರುತ್ತಿದೆ. ವಿಧಾನಸಭೆಯಲ್ಲಿರುವ 123 ಶಾಸಕರ ಪೈಕಿ 39 ಶಾಸಕರಿಗೆ ಟಿಕೆಟ್ ಭಾಗ್ಯವನ್ನ ನಿರಾಕರಿಸಲಾಗುವ ಈ ಸುದ್ದಿ ಕಾಂಗ್ರೆಸ್ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿದೆ.

ಟಿಕೆಟ್ ಭಾಗ್ಯ ಕಳೆದುಕೊಳ್ಳುವ ಭೀತಿಯಲ್ಲಿರುವವರು ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿರುವ ಸುದ್ದಿಯೂ ಇದೆ. ಮುಂದಿನ ವರ್ಷ ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಣಕ್ಕಿಳಿಯುವ ಕಾಂಗ್ರೆಸ್ ಪಕ್ಷ ಈಗಾಗಲೇ ಗೆಲ್ಲಬಲ್ಲ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಬೂಥ್ ಮಟ್ಟದಲ್ಲಿ ಕಾರ್ಯಕರ್ತರ ಸಲಹೆಗಳನ್ನು ಪಡೆಯುವ ಕಾರ್ಯ ನಡೆದಿದೆ ಎನ್ನಲಾಗಿದೆ.

ಯಾರಾರಿಗೆ ಇಲ್ಲ ಕೈ ಟಿಕೆಟ್ ಭಾಗ್ಯ?
ಅಂಬರೀಶ್​​​, ಮಂಡ್ಯ
ಶ್ಯಾಮನೂರು ಶಿವಶಂಕರಪ್ಪ, ದಾವಣಗೆರೆ ದಕ್ಷಿಣ
ಮನೋಹರ ತಹಶೀಲ್ದಾರ್, ಹಾನಗಲ್ ಶಾಸಕ
ಎ.ಬಿ.ಮಾಲಕರೆಡ್ಡಿ, ಯಾದಗಿರಿ
ಎನ್.ವಿ. ಗೋಪಾಲಕೃಷ್ಣ, ಬಳ್ಳಾರಿ ಗ್ರಾಮೀಣ
ರುದ್ರೇಶ್​​ ಗೌಡ, ಬೇಲೂರು
ಬಿ.ಬಿ ಚಿಮ್ಮನಕಟ್ಟಿ, ಬಾದಾಮಿ
ಎ.ಎಸ್. ಪಾಟೀಲ್ ನಡಹಳ್ಳಿ, ದೇವರಹಿಪ್ಪರಗಿ
ಜಿ.ರಾಮಕೃಷ್ಣ, ಕಲಬುರಗಿ ಗ್ರಾಮೀಣ
ಬಿ.ಎಂ ನಾಗರಾಜ, ಸಿರಗುಪ್ಪ
ಶಿವಮೂರ್ತಿ ನಾಯ್ಕ್​, ಮಾಯಕೊಂಡ
ರಾಜೇಶ್​​, ಜಗಳೂರು

click me!