
ಗುಜರಾತ್(ಡಿ.19): ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಅದೇ ರಸ್ತೆ ಮಧ್ಯದಲ್ಲಿ ಸಿಂಹವೊಂದು ಕುಳಿತಿರುವುದನ್ನು ಕಂಡರೆ ಹೇಗಾಗುತ್ತದೆ? ಅಬ್ಬಾ....! ಇಂತಹ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ. ಆದರೆ ಗುಜರಾತ್'ನಲ್ಲಿ ಇಂತಹುದೇ ಒಂದು ಘಟನೆ ನಡೆದಿದ್ದು, ನಡು ಬೀದಿಯಲ್ಲಿ ಕುಳಿತ್ತಿದ್ದ ಸಿಂಹವನ್ನು ಕಂಡು ಜನರು ತಮ್ಮ ಮನೆಗೆ ಓಡಿ ಹೋಗಿದ್ದಾರೆ.
ಗುಜರಾತ್'ನ ಅಮರೇಲಿಯ ಒಂದು ಊರಿಗೆ ಕಾಡಿನಿಂದ ಸಿಂಹವೊಂದು ಬಂದಿದ್ದು, ಇದನ್ನು ಕಂಡ ಊರಿನ ಜನರು ಆತಂಕಗೊಂಡಿದ್ದಾರೆ. ಈ ಕುರಿತಾಗಿ ವರದಿ ಮಾಡಿರುವ ಪತ್ರಿಕೆಯೊಂದು ಜನರು ಓಡಾಡುವ ರಸ್ತೆಯಲ್ಲಿ ಸಿಂಹವೂ ಓಡಾಡಲಾರಂಭಿಸಿತ್ತು, ಇದನ್ನು ಕಂಡು ಆತಂಕಪಟ್ಟ ಜನರು ತಮ್ಮ ತಮ್ಮ ಮನೆಗಳಿಗೆ ಓಡಿ ಹೋಗಿ ಭದ್ರವಾಗಿ ಕುಳಿತಿದ್ದಾರೆ. ಒಂದೆಡೆ ಸಿಂಹದ ನಾಡಿಗೆ ಬಂದ ಸುದ್ದಿ ವೇಗವಾಗಿ ಊರಿಡೀ ಹಬ್ಬುತ್ತಿದ್ದರೆ ಮತ್ತೊಂದೆಡೆ ಸಿಂಹ ಇದ್ಯಾವುದರ ಪರಿವೆ ಇಲ್ಲದೇ ಊರಿನ ಗಲ್ಲಿ ಗಲ್ಲಿಗಳಲ್ಲಿ ನಿರಾತಂಕವಾಗಿ ಓಡಾಡುತಿತ್ತಂತೆ.
ಇದೇ ವೇಳೆ ಅಲ್ಲಿ ಓಡಾಡುತ್ತಿದ್ದ ದನವೊಂದು ಈ ಸಿಂಹಕ್ಕೆ ಆಹಾರವಾಗಿದೆ. ಒಂದೆಡೆ ದನ ತನ್ನ ರಕ್ಷಣೆಗಾಗಿ ಬೊಬ್ಬೆ ಹಾಕುತ್ತಿದ್ದರೆ, ಮತ್ತೊಂದೆಡೆ ಮನೆಯೊಳಗಿರುವ ಜನರು ಈ ಮನಕಲುಕುವ ದೃಶ್ಯ ನೋಡಿದರೂ ಸಹಾಯ ಮಾಡಲಾಗದ ಪರಿಸ್ಥಿಯತಿಯಲ್ಲಿದ್ದರು. ಆದರೆ ಕೆಲ ಸಮಯದ ಬಳಿಕ ಜನರ ಕಿರುಚಾಟದಿಂದ ಸಿಂಹ ಮತ್ತೆ ಕಾಡಿನೆಡೆ ತೆರಳಿದೆ.
ಸಿಂಹದ ಈ ವಿಡಿಯೋ ಸಾಮಾಝಿಕ ಜಾಲಾತಾಣಗಳಲ್ಲಿ ಇದೀಗ ವೈರಲ್ ಆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.