ಮನೆಯಲ್ಲಿ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಿ.!

By Suvarna Web DeskFirst Published Dec 10, 2017, 1:44 PM IST
Highlights

ಮೊಬೈಲ್ ಸಂಖ್ಯೆ ಜತೆ ಆಧಾರ್ ಜೋಡಣೆ ಮಾಡಲು, ಆಧಾರ್ ಜೆರಾಕ್ಸ್ ಪ್ರತಿ ಇಟ್ಟುಕೊಂಡು ಅಂಗಡಿಗಳಿಗೆ ಅಲೆದಾಡಬೇಕಾಗಿಲ್ಲ. ಜ.1ರಿಂದ ಮನೆಯಲ್ಲೇ ಕುಳಿತು ಆ ಪ್ರಕ್ರಿಯೆಯನ್ನು ಮುಗಿಸಬಹುದು. ಇದಕ್ಕಾಗಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಮೂಲಕ ಪರಿಶೀಲನೆ ಮುಗಿಸುವ ಧ್ವನಿಸೂಚಿತ ವ್ಯವಸ್ಥೆ ಜಾರಿಗೆ ಬರುತ್ತಿದೆ.

ನವದೆಹಲಿ(ಡಿ.10): ಮೊಬೈಲ್ ಸಂಖ್ಯೆ ಜತೆ ಆಧಾರ್ ಜೋಡಣೆ ಮಾಡಲು, ಆಧಾರ್ ಜೆರಾಕ್ಸ್ ಪ್ರತಿ ಇಟ್ಟುಕೊಂಡು ಅಂಗಡಿಗಳಿಗೆ ಅಲೆದಾಡಬೇಕಾಗಿಲ್ಲ. ಜ.1ರಿಂದ ಮನೆಯಲ್ಲೇ ಕುಳಿತು ಆ ಪ್ರಕ್ರಿಯೆಯನ್ನು ಮುಗಿಸಬಹುದು. ಇದಕ್ಕಾಗಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಮೂಲಕ ಪರಿಶೀಲನೆ ಮುಗಿಸುವ ಧ್ವನಿಸೂಚಿತ ವ್ಯವಸ್ಥೆ ಜಾರಿಗೆ ಬರುತ್ತಿದೆ.

ಹೇಗಿರುತ್ತೆ ಇದು?: ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್‌ನಿಂದ ‘ಐವಿಆರ್‌ಎಸ್’ ಸಂಖ್ಯೆಯೊಂದಕ್ಕೆ ಕರೆ ಮಾಡಬೇಕು. ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಬರುವ ಮಾಹಿತಿಯನ್ನು ಆಲಿಸಿ ಸೂಚನೆ ಪಾಲಿಸಬೇಕು. ನಂತರ ಆಧಾರ್ ಪರಿಶೀಲನೆಗೆ ಒಪ್ಪಿಗೆ ನೀಡಬೇಕು. ಅದಾದ ಬಳಿಕ ಮೊಬೈಲ್‌ಗೆ ಒಂದು ಒಟಿಪಿ ಬರುತ್ತದೆ. ಅದನ್ನು ಬಳಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಮೊಬೈಲ್ ಸಂಖ್ಯೆಗೆ ಆಧಾರ್ ಸಂಯೋಜಿಸಲು ಫೆ.6 ಕಡೆಯ ದಿನ.

click me!