'ಧರ್ಮ ವಿಭಜನೆ ಮಾಡಿದ್ರೆ ಚುನಾವಣೆಯಲ್ಲಿ ಧರ್ಮ ಯುದ್ಧ'

Published : Jan 03, 2018, 05:54 PM ISTUpdated : Apr 11, 2018, 12:36 PM IST
'ಧರ್ಮ ವಿಭಜನೆ ಮಾಡಿದ್ರೆ ಚುನಾವಣೆಯಲ್ಲಿ ಧರ್ಮ ಯುದ್ಧ'

ಸಾರಾಂಶ

ಸರ್ಕಾರ ಅಥವಾ ಯಾವುದೇ ಪಕ್ಷವಾಗಲಿ ವೀರಶೈವ ಲಿಂಗಾಯತ ಧರ್ಮ ವಿಘಟನೆಗೆ ಕಾರಣವಾದರೆ ಚುನಾವಣೆಯಲ್ಲಿ ಧರ್ಮ ಯುದ್ಧ ಸಾರಬೇಕಾಗುತ್ತದೆ ದಾವಣಗೆರೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ (ಜ.03): ಸರ್ಕಾರ ಅಥವಾ ಯಾವುದೇ ಪಕ್ಷವಾಗಲಿ ವೀರಶೈವ ಲಿಂಗಾಯತ ಧರ್ಮ ವಿಘಟನೆಗೆ ಕಾರಣವಾದರೆ ಚುನಾವಣೆಯಲ್ಲಿ ಧರ್ಮ ಯುದ್ಧ ಸಾರಬೇಕಾಗುತ್ತದೆ ದಾವಣಗೆರೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಯ ರೇಣುಕಾಮಂದಿರದಲ್ಲಿ ರಂಭಾಪುರಿ ಸ್ವಾಮೀಜಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಧರ್ಮ ಬೆಂಬಲಿತ ಸ್ವಾಮೀಜಿಗಳಿಂದ ಸಭೆ ನಡೆದಿದೆ.

ಸರ್ಕಾರವೇ ಲಿಂಗಾಯತ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದೆ. ಸೌಲಭ್ಯಗಳ ಆಮಿಷವೊಡ್ಡಿ ಲಿಂಗಾಯತ ಸಮಾಜವನ್ನು  ಒಡೆಯುತ್ತಿದೆ. ಸರ್ಕಾರದಲ್ಲಿರುವವರೇ ಈ ಕೃತ್ಯಕ್ಕೆ ಹಾಕಿದ್ದಾರೆ.  ಹೀಗಾಗಿ, ಸರ್ಕಾರವೇ ನಮ್ಮ ಟಾರ್ಗೆಟ್ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.

ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

* ಲಿಂಗಾಯತ ಧರ್ಮ ಹೋರಾಟ ಸಮಿತಿ ಕರೆ ನೀಡಿದ್ದ ಚರ್ಚೆಗೆ ಸ್ವಾಗತ ನೀಡಲು ತೀರ್ಮಾನ

* ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿ ಫೆಬ್ರವರಿ 1 ರಂದು ಸಭೆ ನಡೆಸಬೇಕೆಂದು ಮನವಿ

* ಎರಡೂ ಕಡೆಯಿಂದ  7 ಮಂದಿ ಭಾಗವಹಿಸಬೇಕು. ವಿಡಿಯೋ ಚಿತ್ರೀಕರಣ ಮಾಡಬೇಕು. ವ್ಯಕ್ತಿಗತ ಆರೋಪ ಮಾಡುವಂತಿಲ್ಲ.

* ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರಕ್ಕೆ ಸಲ್ಲಿಸಿದ್ದ 3 ಮನವಿ ತಿರಸ್ಕ್ರತಗೊಂಡ ಬಗ್ಗೆ ಆದೇಶ ಪ್ರತಿ ಬಹಿರಂಗಪಡಿಸಬೇಕು..

* ಲಿಂಗಾಯತ ಪದಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆಗೆ ಸರ್ಕಾರದಿಂದ ಒಪ್ಪಿಗೆ ಇದ್ದರೆ ಬಹಿರಂಗಪಡಿಸಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು