
ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡ ಹಾಗೆ ಎಂಬ ಮಾತಿದೆ. ಈ ಗಾದೆ ಅಮೆರಿಕದ ಮಹಿಳೆಯೊಬ್ಬಳಿಗೆ ಸರಿಯಾಗಿ ಹೊಂದುತ್ತದೆ. ನೆಬ್ರಸ್ಕಾ ರಾಜ್ಯದ ಲಿಂಕನ್ ನಗರದ ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯತಮ ಬರೆದ ಪ್ರೇಮಪತ್ರಗಳನ್ನು ಸುಡಲು ಹೊಗಿ ಇಡೀ ಅಪಾರ್ಟ್‌ಮೆಂಟ್ ಹೊತ್ತಿ ಉರಿಯುಂತೆ ಮಾಡಿದ್ದಾಳೆ.
20 ವರ್ಷದ ಹಿಂದೆ ಚೈನ್ ಎಳೆದು ರೈಲು ನಿಲ್ಲಿಸಿದ್ದ ಸನ್ನಿ, ಕರೀಷ್ಮಾಗೆ ಈಗ ಸಂಕಷ್ಟ!
ಬ್ಯೂಟೇನ್ ಟಾಚ್‌ರ್‍ನಿಂದ ಪತ್ರಗಳಿಗೆ ಬೆಂಕಿ ಹಚ್ಚಿ, ಕೆಲವೊಂದನ್ನು ಅಲ್ಲೇ ಇಟ್ಟು ಇನ್ನೊಂದು ಕೋಣೆಗೆ ಹೋಗಿ ಮಲಗಿಕೊಂಡಿದ್ದಳು. ಆಕೆಗೆ ಎಚ್ಚರವಾಗುವಷ್ಟರಲ್ಲಿ ನೆಲಕ್ಕೆ ಹಾಸಿದ್ದ ಕಾರ್ಪೆಟ್‌ಗೆ ಬೆಂಕಿ ಬಿದ್ದು ಅಪಾರ್ಟ್‌ಮೆಂಟ್‌ಗೆ ಬೆಂಕಿ ಹರಡಿತ್ತು. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಸುಮಾರು 2.80 ಲಕ್ಷ ರು. ಆಸ್ತಿ ಪಾಸ್ತಿ ನಾಶವಾಗಿತ್ತು ಎಂದು ಪೊಲಿಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.