ಉಚಿತ ವಿದ್ಯುತ್ 40 ಯುನಿಟ್'ಗೆ ಹೆಚ್ಚಳ!

Published : May 27, 2017, 11:16 AM ISTUpdated : Apr 11, 2018, 01:08 PM IST
ಉಚಿತ ವಿದ್ಯುತ್ 40 ಯುನಿಟ್'ಗೆ ಹೆಚ್ಚಳ!

ಸಾರಾಂಶ

ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳ ಅಡಿಯಲ್ಲಿ ಉಚಿತ ವಿದ್ಯುತ್‌ ಪಡೆಯುತ್ತಿರುವ ರಾಜ್ಯದ ಸುಮಾರು 29 ಲಕ್ಷ ಫಲಾನುಭವಿಗಳ ಕುಟುಂಬಗಳ ಮಾಸಿಕ ವಿದ್ಯುತ್‌ ಬಳಕೆ ಮಿತಿಯನ್ನು 18 ಯೂನಿಟ್‌'ಗಳಿಂದ 40 ಯೂನಿಟ್‌ಗಳಿಗೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು(ಮೇ.27): ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳ ಅಡಿಯಲ್ಲಿ ಉಚಿತ ವಿದ್ಯುತ್‌ ಪಡೆಯುತ್ತಿರುವ ರಾಜ್ಯದ ಸುಮಾರು 29 ಲಕ್ಷ ಫಲಾನುಭವಿಗಳ ಕುಟುಂಬಗಳ ಮಾಸಿಕ ವಿದ್ಯುತ್‌ ಬಳಕೆ ಮಿತಿಯನ್ನು 18 ಯೂನಿಟ್‌'ಗಳಿಂದ 40 ಯೂನಿಟ್‌ಗಳಿಗೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾ​ಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಈ ವಿಷಯ ತಿಳಿಸಿದರು. ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದಲ್ಲಿ 23.49 ಲಕ್ಷ ಕುಟುಂಬಗಳು ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ ಪಡೆಯುತ್ತಿದ್ದು, ಈ ವರ್ಷ ಫಲಾನುಭವಿಗಳ ಸಂಖ್ಯೆ 29 ಲಕ್ಷಕ್ಕೆ ಏರಿಕೆಯಾಗಲಿದೆ. ಈ ಕುಟುಂಬಗಳು ಇನ್ನು ಮುಂದೆ ಮಾಸಿಕ 40 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪಡೆಯಲಿದ್ದು, ಅದಕ್ಕೂ ಹೆಚ್ಚಿನ ಯೂನಿಟ್‌ಗಳ ಬಳಕೆಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಯಡಿ ತಲಾ ಕುಟುಂಬಕ್ಕೆ 18 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದರಿಂದ ರಾಜ್ಯ ಸರ್ಕಾರ 182.82 ಕೋಟಿ ರು.ಗಳ ಸಹಾಯಧನ ಭರಿಸುತ್ತಿತ್ತು. ಆದರೆ ಉಚಿತ ಬಳಕೆಯ ಮಿತಿ 40 ಯೂನಿಟ್‌ಗೆ ಹೆಚ್ಚಿಸುವುದರಿಂದ 205.57 ಕೋಟಿ ರು.ಗಳ ಹೆಚ್ಚುವರಿ ಸಹಾಯಧನದೊಂದಿಗೆ ಒಟ್ಟು ವಾರ್ಷಿಕ 388.39 ಕೋಟಿ ರು.ಗಳ ಹೊರೆಯಾಗಲಿದೆ. ಈ ಹೆಚ್ಚಳದಿಂದ 312 ಮಿಲಿಯನ್‌ ಯೂನಿಟ್‌ಗಳಿದ್ದ ಪ್ರಮಾಣ ಈಗ 610 ಮಿಲಿಯನ್‌ ಯೂನಿಟ್‌ಗಳಿಗೆ ಏರಿಕೆಯಾಗಲಿದೆ. ಮಾಸಿಕ 22 ಯೂನಿಟ್‌ಗಳ ಹೆಚ್ಚುವರಿ ಉಚಿತ ವಿದ್ಯುತ್‌ ಒದಗಿಸುವ ಮೂಲಕ ಆ ವರ್ಗದವರ ಜೀವನಶೈಲಿ ಉತ್ತಮಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 40 ಹೊಸ ಉಪ ಕೇಂದ್ರಗಳ ಸ್ಥಾಪನೆ:

ಪ್ರಸಕ್ತ ವರ್ಷ ವಿದ್ಯುತ್‌ ಸರಬರಾಜಿನಲ್ಲಿ ಸುಧಾರಣೆ ತರಲು ರಾಜ್ಯದಲ್ಲಿ ಹೊಸದಾಗಿ 40 ಉಪಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರು ಪ್ರಸರಣ ವಲಯದಲ್ಲಿ 11, ಬಾಗಲಕೋಟೆ ವಲಯದಲ್ಲಿ 7, ತುಮಕೂರು ಮತ್ತು ಕಲಬುರಗಿ ವಲಯದಲ್ಲಿ ತಲಾ 6, ಹಾಸನ ಹಾಗೂ ಮೈಸೂರು ವಲಯದಲ್ಲಿ ತಲಾ 5 ಉಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರಿಂದ ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಗ್ರಾಹಕರೆಡೆಗೆ ಸುಗಮವಾಗಿ ರವಾನಿಸಲು ಮತ್ತು ವಿವಿಧ ಪ್ರದೇಶಗಳ ವೋಲ್ಟೇಜ್‌ ಸಮಸ್ಯೆ ನಿವಾರಿಸಲು ಅನುಕೂಲ ಆಗಲಿದೆ. ಪ್ರಸರಣದಲ್ಲಿ ನಷ್ಟಕಡಿಮೆಯಾಗಿ, ಗುಣಮಟ್ಟದ ವಿದ್ಯುತ್‌ ಸರಬರಾಜಿಗೆ ಅನುಕೂಲವಾಗಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ