‘ಐಎಂಎ ವಂಚಕ ಮನ್ಸೂರ್ ಜೀವಂತವಾಗಿ ಉಳಿಯೋದೆ ಅನುಮಾನ’

Published : Jul 01, 2019, 09:24 PM ISTUpdated : Jul 01, 2019, 09:35 PM IST
‘ಐಎಂಎ ವಂಚಕ ಮನ್ಸೂರ್ ಜೀವಂತವಾಗಿ ಉಳಿಯೋದೆ ಅನುಮಾನ’

ಸಾರಾಂಶ

ಒಂದು ಕಡೆ ದೋಸ್ತಿ ಸರಕಾರದಲ್ಲಿ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿದ್ದರೆ ಇತ್ತ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗ[ಜು. 01]  ಐಎಂಎ ಪ್ರಕರಣದಲ್ಲಿ ಜನರ ಹಣ ದೋಚಿಕೊಂಡು ಪರಾರಿ ಆಗಿರುವ ಮನ್ಸೂರ್ ಜೀವಂತವಾಗಿ ಉಳಿಯೋದು ಅನುಮಾನವೆಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಶಿವಮೊಗ್ಗದ ಹೋಟೆಲ್ ವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಡವರ ಶ್ರಮದ ಹಣವನ್ನ ಮನ್ಸೂರ್ ಲೂಟಿಮಾಡಿಕೊಂಡು ಪರಾರಿ ಆಗಿದ್ದು, ಅವನನ್ನ ಮೈತ್ರಿ ಪಕ್ಷದವರೆ ಸಾಯಿಸಬಹುದು ಅಥವಾ ಆತನ ಆತ್ಮಹತ್ಯೆಗೆ ಕಾರಣವಾದರೂ ಆಶ್ಚರ್ಯವಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಮನ್ಸೂರ್ ಖಾನ್ ಎಲ್ಲಿದ್ದಾನೆ?

ಅವರ ಸಾವಿನ ಮೇಲೆ ಮೈತ್ರಿ ಪಕ್ಷದ ಪ್ರಭಾವಿಗಳ  ಅಳಿವು  ಉಳಿವಿನ ಪ್ರಶ್ನೆ ಇದೆ. ಇದೇ ಕಾರಣಕ್ಕೆ ದೋಸ್ತಿ ಸರಕಾರದವರೆ ಆತನ ಸಾವಿಗೆ  ಕಾರಣವಾಗಬಲ್ಲರು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!