
ಕೈರೋ[ಜೂ.8] ಲಿಬೇನಾನ್ ನ ಪ್ರವಾಸಿಗರೊಬ್ಬರು ಈಜಿಫ್ಟ್ ನಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ. ಕಳೆದ ತಿಂಗಳ ಅಂತ್ಯದಲ್ಲಿ ಬಂಧನ ವಾಗಿದ್ದ ಮಹಿಳೆಗೆ 8 ವರ್ಷಗಳ ಜೖಲು ಶಿಕ್ಷೆ ನೀಡಲಾಗಿದೆ.
ಈಜಿಫ್ಟ್ ಪ್ರವಾಸದಲ್ಲಿದ್ದ ಲಿಬೆನಾನ್ ಮೋನಾ ಎಲ್-ಮಹೋತ್ ರನ್ನು ಕೈರೋ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈಜಿಫ್ಟ್ ನ ಎಲ್ಲ ಕಡೆ ಪ್ರವಾಸ ಮಾಡಿದ್ದ ಮಹಿಳೆ ತನಗಾದ ಕೆಟ್ಟ ಅನುಭವ ಬರೆದುಕೊಳ್ಳುವ ಭರದಲ್ಲಿ ಈಜಿಫ್ಟ್ ನ್ನು ‘son of a bitch country’ ಎಂದು ಕರೆದಿದ್ದಳು. ಫೇಸ್ ಬುಕ್ ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಳು.
ಪ್ರವಾಸ ಮಾಡುವಾಗ ಟ್ಯಾಕ್ಸಿ ಚಾಲಕರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಳು. ಈ ತೀರ್ಮಾನ ಪುನರ್ ಪರಿಶೀಲನೆ ಮಾಡಲು ಮನವಿ ಸಲ್ಲಿಸಲಾಗಿದ. ಆಕೆಯ ಮಾನಸಿಕ ಸ್ಥಿತಿಯೂ ಸರಿ ಇರಲಿಲ್ಲ ಎಂದು ವಕೀಲರು ವಾದ ಮುಂದಿಟ್ಟಿದ್ದಾರೆ.(ಸಾಂದರ್ಭಿಕ ಚಿತ್ರ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.