ರಾಜ್ಯದಲ್ಲೂ ಇನ್ಮುಂದೆ ವಿದೇಶಾಂಗ ಇಲಾಖೆ ಕಚೇರಿ..?

Published : Feb 13, 2017, 02:44 AM ISTUpdated : Apr 11, 2018, 12:43 PM IST
ರಾಜ್ಯದಲ್ಲೂ ಇನ್ಮುಂದೆ ವಿದೇಶಾಂಗ ಇಲಾಖೆ ಕಚೇರಿ..?

ಸಾರಾಂಶ

ವಿವಿಧ ರಾಜ್ಯಗಳ ರಾಜಧಾನಿಯಲ್ಲಿ ವಿದೇಶ ಭವನ ಸ್ಥಾಪಿಸುವ ಪ್ರಕ್ರಿಯೆ ಆರಂಭಿಸಿರುವ ವಿಷಯವನ್ನು ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯೊಂದಕ್ಕೆ ವಿದೇಶಾಂಗ ಮಂತ್ರಾಲಯ ಟಿಪ್ಪಣಿ ಮೂಲಕ ತಿಳಿಸಿದೆ.

ನವದೆಹಲಿ: ವಿದೇಶಾಂಗ ಸಚಿವಾಲಯವನ್ನು ರಾಜ್ಯ​ಗಳಿಗೂ ಒಯ್ಯಲು ಮುಂದಾಗಿರುವ ಕೇಂದ್ರ, ರಾಜ್ಯಗಳ ರಾಜಧಾನಿಗಳಲ್ಲಿ ವಿದೇಶ ಭವನದ ಹೆಸ​ರಿನ ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಆರಂಭಿಸಿದೆ. ಇದಕ್ಕಾಗಿ ಜಾಗ ಹಾಗೂ ಕಟ್ಟಡ ಹುಡುಕುವ ಕೆಲಸವನ್ನು ಪ್ರಾರಂಭಿಸಿದೆ.
ವಿದೇಶಾಂಗ ಸಚಿವಾಲಯದ ಶಾಖಾ ಕಚೇರಿಗಳು, ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗಳು ಹಾಗೂ ವಲಸೆ ವಿಭಾಗಕ್ಕೆ ಸಂಬಂಧಿಸಿದ ಕಚೇರಿಗಳನ್ನು ವಿದೇಶ ಭವನಗಳು ಹೊಂದಿರುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರ ಕೇಂದ್ರ ಸರ್ಕಾರದ ಅಧೀನದ​​ಲ್ಲಿಯೇ ಬರುತ್ತದೆಯಾದರೂ, ಕೆಲ​ವೊಂದು​ ರಾಜ್ಯ ಸರ್ಕಾರಗಳು ಉದ್ಯಮ ಹಾಗೂ ಹೂ​ಡಿಕೆ ಸಂಬಂಧ ನೇರವಾಗಿ ನಿರ್ದಿಷ್ಟ ದೇಶಗಳ ಜತೆ ವ್ಯವಹಾರ ನಡೆಸುತ್ತಿವೆ. ಇದಕ್ಕೆ ಕೇಂದ್ರದ ತಕರಾರು ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ವಿದೇಶ ಭವನಗಳನ್ನು ಸ್ಥಾಪಿಸಿ, ಅಲ್ಲಿನ ಅಧಿಕಾರಿಯ ಮೂಲಕ ರಾಜ್ಯಗಳಿಗೆ ಅಂತಾರಾ​ಷ್ಟ್ರೀಯ ಸಂಪರ್ಕ ಕಲ್ಪಿಸಿಕೊಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

 

ವಿವಿಧ ರಾಜ್ಯಗಳ ರಾಜಧಾನಿಯಲ್ಲಿ ವಿದೇಶ ಭವನ ಸ್ಥಾಪಿಸುವ ಪ್ರಕ್ರಿಯೆ ಆರಂಭಿಸಿರುವ ವಿಷಯವನ್ನು ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯೊಂದಕ್ಕೆ ವಿದೇಶಾಂಗ ಮಂತ್ರಾಲಯ ಟಿಪ್ಪಣಿ ಮೂಲಕ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ