ಸಚಿವ ಕೃಷ್ಣ ಬೈರೇಗೌಡ ಹಾಗೂ ಬೆಂಬಲಿಗರ ವಿರುದ್ಧ ಭೂಕಬಳಿಕೆ ಆರೋಪ

By Suvarna Web DeskFirst Published Apr 1, 2017, 10:09 AM IST
Highlights

ಸಚಿವ ಕೃಷ್ಣ ಬೈರೇಗೌಡ ಹಾಗೂ ಬೆಂಬಲಿಗರ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಿದೆ. ಇಂತಹ ಗಂಭಿರ ಆರೋಪ ಮಾಡಿರೋದು ನಗರ ಬಿಜೆಪಿ ವಕ್ತಾರ ಹಾಗೂ ಮಾಜಿ ಕಾರ್ಪೊರೆಟರ್ ಎನ್.ಆರ್. ರಮೇಶ್. ಭೂಕಬಳಿಕೆ ಬಗ್ಗೆ ದಾಖಲೆಯನ್ನೂ ಸಹ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು (ಏ.01): ಸಚಿವ ಕೃಷ್ಣ ಬೈರೇಗೌಡ ಹಾಗೂ ಬೆಂಬಲಿಗರ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಿದೆ. ಇಂತಹ ಗಂಭಿರ ಆರೋಪ ಮಾಡಿರೋದು ನಗರ ಬಿಜೆಪಿ ವಕ್ತಾರ ಹಾಗೂ ಮಾಜಿ ಕಾರ್ಪೊರೆಟರ್ ಎನ್.ಆರ್. ರಮೇಶ್. ಭೂಕಬಳಿಕೆ ಬಗ್ಗೆ ದಾಖಲೆಯನ್ನೂ ಸಹ ಬಿಡುಗಡೆ ಮಾಡಿದ್ದಾರೆ.

ಬ್ಯಾಟರಾಯನಪುರ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯ ವಾರ್ಡ ನಂ.11 ರಲ್ಲಿ ಬರುವ, ಸಿಂಗಾಪುರ ಗ್ರಾಮದ ಸರ್ವೆ ನಂ 109 ರಲ್ಲಿ, ಸುಮಾರು 1800 ಕೋಟಿಗೂ ಅಧಿಕ ಭೂಮಿ ಕಬಳಿಸಿದ್ದಾರೆ. ಅಷ್ಟೇ ಅಲ್ಲದೇ  2008 ರಿಂದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸುಮಾರು 5000 ಕೋಟಿ ಬೆಲೆ ಬಾಳುವ ಸರ್ಕಾರಿ ಭೂಮಿ ಕಬಳಿಸಿದ್ದಾರೆ. ಕಾನೂನು ಬಾಹಿರವಾಗಿ 15 ಮಂದಿ ಹೆಸರಿಗೆ ಎಂ.ಸಿ. ಮಾಡಿಸಿಕೊಂಡಿದ್ದಾರೆ. ಅಲ್ಲದೆ ಸಿಂಗಾಪುರ ಕೆರೆಯನ್ನು ಅಕ್ರಮ ಬಡಾವಣೆಯನ್ನಾಗಿ ನಿರ್ಮಿಸಲಾಗಿದೆ. ಸಚಿವ ಕೃಷ್ಣ ಭೈರೇಗೌಡರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಪಡಿಸಿದ್ದಾರೆ. ಕೃಷ್ಣ ಭೈರೇಗೌಡ ಸೇರಿದಂತೆ 15 ಮಂದಿ ವಿರುದ್ಧ ಬಿಎಂಟಿಎಫ್ ಮತ್ತು ಭೂಕಬಳಿಕೆ ನಿಗ್ರಹ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ದಾಖಲೆಗಳ ಸಮೇತ ರಾಜ್ಯಪಾಲರಿಗೂ ಸಹ ದೂರು ನೀಡಿದ್ದಾರೆ.

click me!