
ಬೆಳಗಾವಿ (ಜೂ. 17): ಸಚಿವೆ ಜಯಮಾಲಾ ಬಗ್ಗೆ ನೀಡಿದ್ದ ಹೇಳಿಕೆ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಉತ್ತರ ಕರ್ನಾಟಕ ಶೈಲಿಯಲ್ಲಿ ಸೇವೆ ಎಂದರೆ ಅದು ಉರುಳು ಸೇವೆ ಅಂತೀವಿ. ಹರಕೆ ಸೇವೆ ಅಂತೀವಿ ಮತ್ತು ಪಕ್ಷದ ಸೇವೆ ಅಂತೀವಿ. ನಾನು ಆ ಅರ್ಥದಲ್ಲಿ ಜಯಮಾಲಾ ಅವರು ಪಕ್ಷದ ಸೇವೆ ಮಾಡಿದ್ದಾರೆ ಅಂತ ಹೇಳಿದ್ದೀನಿ. ನಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದು ಲಕ್ಷ್ಮೀ ಹೆಬ್ಬಾಳ್’ಕರ್ ಹೇಳಿದ್ದಾರೆ.
ಜಯಮಾಲಾ ಅವರ ಜೊತೆ ನನ್ನ ವೈಯಕ್ತಿಕ ಸಂಬಂಧ ಅನ್ಯೋನ್ಯವಾಗಿದೆ. ಜಯಮಾಲಾ ನನ್ನ ಹಿರಿಯ ಅಕ್ಕನಂತಿದ್ದಾರೆ. ಸದಾ ನನ್ನ ಬೆನ್ನು ತಟ್ಟುವ ಕೆಲಸವನ್ನು ಜಯಮಾಲಾ ಮಾಡಿದ್ದಾರೆ.
ಅವರ ಭವಿಷ್ಯ ಉಜ್ವಲವಾಗಲಿ, ಅವರಿಂದ ಒಳ್ಳೆಯ ಕೆಲಸ ಆಗಲಿ. ಅದರಿಂದ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರಲಿ ಅಂತ ಹೇಳಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳ್’ಕರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.