
ಕರ್ನಾಟಕದ 15 ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ರಾಜಕೀಯ ನಾಯಕರ ವಾಗ್ದಾಳಿ ತಾರಕಕ್ಕೇರಿದ್ದು, ಪರಸ್ಪರ ಕೆಸರೆರಚಾಟ ಮುಂದುವರೆದಿದೆ. ಸದ್ಯ ಗೋಕಾಕ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಣ್ಣ ಹಾಗೂ ತಮ್ಮಂದಿರ ನಡುವೆ ಸಮರ ಆರಂಭವಾಗಿದೆ.
ಹೌದು ಮೈತ್ರಿ ಸರ್ಕಾರವಿದ್ದಾಗ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ, ಸನರ್ಹಗೊಂಡಿದ್ದ ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸುವ ತಯಾರಿಯಲ್ಲಿದ್‌ದಾರೆ. ಾದರೆ ಅತ್ತ ತಮಗೆ ಕೈಕೊಟ್ಟ ಶಾಸಕನಿಗೆ ಬುದ್ಧಿ ಕಲಿಸಲು ಕಾಂಗ್ರೆಸ್ ಕೂಡಾ ಪ್ರಬಲವಾದ ಅಸ್ತ್ರವ್ನನೇ ಬಳಸಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಅವರ ತಮ್ಮ ಲಖನ್ ಜಾರಕಿಹೊಳಿಯನ್ನೇ ಕಣಕ್ಕಿಳಿಸಲು ಸಜ್ಜಾಗಿದೆ. ಹೀಗಿರುವಾಗ ಕಸದ್ಯ ರಮೇಶ್ ಕುಮಾರ್ ತಮ್ಮ, ಲಖನ್ ವಿರುದ್ಧವೇ ಅಬ್ಬರಿಸಿದ್ದಾರೆ.
ಬೆಳಗಾವಿಯ ಗೋಕಾಕ್ ಪಟ್ಟಣದಲ್ಲಿ ಈ ಸಂಬಂಧ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ 'ಲಖನ್ ಸ್ಪರ್ಧಿಸಿದ್ರೆ ಅವನು ನನ್ನ ತಮ್ಮನೇ ಅಲ್ಲ, ಹಿರಿಯ ಅಣ್ಣನಾಗಿ ಸ್ಪರ್ಧೆ ಮಾಡದಂತೆ ತಿಳಿ ಹೇಳ್ತೇನೆ. ಉಪಚುನಾವಣೆಯಲ್ಲಿ ಲಖನ್ ಸ್ಪರ್ಧೆ ಬೇಡ. ಈ ಚುನಾವಣೆಯಲ್ಲಿ ಸುಮ್ಮನಿರಲಿ' ಎಂದಿದ್ದಾರೆ.
’ಯಾವ ಜಾದೂ ಆಯ್ತು ಗೊತ್ತಿಲ್ಲ ಲಖನ್ ಬದಲಾಗಿದ್ದಾನೆ. ಮುಂದಿನ ಚುನಾವಣೆಯಲ್ಲಿ ಗೋಕಾಕ್ ಬಿಟ್ಟು ಕೊಡುತ್ತೇನೆ, ನಾನೇ ಗೆಲ್ಲಿಸುತ್ತೇನೆ. ನಾನು ಯಮಕನಮರಡಿಯಿಂದ ಸ್ಪರ್ಧಿಸಿ ಸತೀಶ್ ತಾಕತ್ ನೋಡುತ್ತೇನೆ’ ಎಂದು ಸವಾಲೆಸೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.