
ಬೆಂಗಳೂರು(ಅ.02): ಇಂದು ಮಹಾತ್ಮಾ ಗಾಂಧಿಯವರ 149ನೇ ಜನ್ಮ ದಿನ. ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸೋದಕ್ಕೆ ನಮ್ಮ ಬೆಂಗಳೂರು ಫೌಂಡೇಷನ್ ಹಾಗೂ ಯೂನ್ಯಾಟೆಡ್ ಬೆಂಗಳೂರು ಸಂಸ್ಥೆ ಮುಂದಾಗಿದೆ.
ನಮ್ಮ ಬೆಂಗಳೂರು, ಸ್ವಚ್ಛ ಬೆಂಗಳೂರು ಎಂಬ ಘೋಷವಾಕ್ಯದೊಂದಿಗೆ ಕೆರೆಗಳು ಹಾಗೂ ಕೆಲ ವಾರ್ಡ್ಗಳನ್ನ ಸ್ವಚ್ಛಗೊಳಿಸುವ ಮೂಲಕ ಗಾಂಧಿಜಯಂತಿ ಆಚರಿಸುತ್ತಿದೆ. ಗಾಂಧಿಜೀ ಕಂಡ ಸ್ವಚ್ಛ ಗ್ರಾಮ ಕನಸನ್ನು ನನಸು ಮಾಡುವ ಉದ್ದೇಶದಿಂದ ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ವಿಶೇಷವಾಗಿ ಆಚರಿಸುತ್ತಿದ್ದಾರೆ.
ಕೋರಮಂಗಲದಿಂದ ನಾಗರಭಾವಿವರೆಗೂ ಸ್ವಚ್ಛತೆ ಜಾಥಾ ನಡೆಯಲಿದ್ದು , ಜಾಥಾದ ನೇತೃತ್ವವನ್ನು ಸಂಸದ ರಾಜೀವ್ ಚಂದ್ರಶೇಖರ್ ವಹಿಸಿದ್ದಾರೆ. ಜಾಗೃತಿ ಱಲಿಯಲ್ಲಿ ವಿವಿಧ ಬಡಾವಣೆಗಳಿಂದ ಜನರು ಭಾಗಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.