
ಕೋಲಾರ(ಜು.02): ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಇಲ್ಲ ಎಂದು ಖಾಸಗಿ ಆಸ್ಪತ್ರೆಗೆ ಹೆರಿಗೆಗೆ ಹೋದರೆ ,ಖಾಸಗಿ ಆಸ್ಪತ್ರೆಯ ವೈದ್ಯರ ಎಡವಟ್ಟು, ನಿರ್ಲಕ್ಷತೆಯಿಂದ ಬಾಣಂತಿ ಜೀವಂತ ಶವವಾಗಿ ಐಸಿಯುನಲ್ಲಿ ಮೂರು ತಿಂಗಳುಗಳಿಂದ ಇದ್ದಾರೆ. ಎಳೆ ಕಂದಮ್ಮ ತಾಯಿಗಾಗಿ ರೊಧಿಸುತ್ತಿದೆ.ಇದು ಕೋಲಾರ ಜಿಲ್ಲೆಯ ಮಾಲೂರು ಖಾಸಗಿ ಆಸ್ಪತ್ರೆಯಲ್ಲಿ ನಡೆದ ಘಟನೆ ಈ ಬಗ್ಗೆ ಒಂದು ವರದಿ.
ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಅದರೆ, ಇಲ್ಲಿ ಜೀವ ಉಳಿಸಬೇಕಾದ ವೈದ್ಯರೇ ಮತ್ತೊಂದು ಜೀವಕ್ಕೆ ಮುಳುವಾಗಿದ್ದಾರೆ. ಹೌದು, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡಕಡತೂರು ಗ್ರಾಮದ ಪಾರ್ಥಸಾರತಿ ಎಂಬುವರ ಮಗಳು ದಿವ್ಯ ಎಂಬಾಕೆ ಚೊಚ್ಚಲ ಹೆರಿಗೆಗಾಗಿ ಪಟ್ಟಣದ ಸೇಂಟ್ ಮೇರಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ನಾರ್ಮಲ್ ಹೆರಿಗೆ ಕಷ್ಟ, ಸಿಸರೀನ್ ಮಾಡಲೇಬೇಕು ಎಂದಾಗ, ಬೇರೆ ವಿಧಿಯಿಲ್ಲದೇ ಪೊಷಕರು ಕೂಡ ಒಪ್ಪಿದ್ದರು. ಆದರೆ, ಇದೀಗ, ಆಪರೇಷನ್ ಬಳಿಕ ದಿವ್ಯ ಕೋಮಾಕ್ಕೆ ಜಾರಿದ್ದು, ಮೂರು ತಿಂಗಳಾದ್ರೂ ಎಚ್ಚರಗೊಂಡಿಲ್ಲ.
ಇನ್ನು, ಯಾವಾಗ ತಮ್ಮ ಕೈಯಿಂದ ತಪ್ಪಾಗಿದೆ ಎಂದು ಅರಿವಾಯ್ತೋ ಆವಾಗ ಸೇಂಟ್ ಮೇರಿಸ್ ಆಸ್ಪತ್ರೆಯ ವೈದ್ಯರು ತಾವು ಮಾಡಿದ ಎಡವಟ್ಟಿನಿಂದ ಪಾರಾಗಲು ದಿವ್ಯಳಿಗೆ ಮೂರ್ಚೆ ರೋಗ ಬಂದಿದೆ. ಆದ್ದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿ ಎಂದು ಸೆಂಟ್ ಜಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಇಲ್ಲಿಯೂ 16 ದಿನಗಳ ಕಾಲ ಚಿಕಿತ್ಸೆ ನೀಡಿದ್ರೂ ಉಪಕಾರಿಯಾಗಿಲ್ಲ. ಬಳಿಕ ನಿಮ್ಹಾನ್ಸ್ ಗೆ ದಾಖಲಿಸಿದಾಗ, ಮೆದುಳು ನಿಷ್ಕ್ರಿಯವಾಗಿದೆ. ಯಾವಾದ ಕೋಮಾದಿಂದ ಹೊರಬರುತ್ತಾರೋ ಹೇಳಲು ಅಸಾಧ್ಯ ಎಂದಿದ್ದಾರೆ. ಇದೀಗ, ದಿವ್ಯಾಳನ್ನ ಕೊಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಕೋಮಾ ಸ್ಥಿತಿಯಲ್ಲಿಯೇ ಇದ್ದಾರೆ.
ಈಗಾಗಲೇ ಸಾಲ ಮಾಡಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದೇವೆ. ಆದ್ರೆ ಮಗಳ ಪರಿಸ್ಥಿತಿ ಸುಧಾರಿಸಿಲ್ಲ. ಇದಕ್ಕೆ ಕಾರಣ ರಾದ ಖಾಸಗಿ ಆಸ್ಪತ್ರೆಯೇ ನೇರ ಹೊಣೆ ಅವರೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಇನ್ನು, ಈ ಆಸ್ಪತ್ರೆಯ ವಿರುದ್ಧ ಈ ಹಿಂದೆಯೂ ಹಲವು ಲೋಪವೆಸಗಿರುವ ಆರೋಪ ಕೇಳಿಬಂದಿದ್ದು, ರೋಗಿಗಳ ಜೀವದ ಜೊತೆ ಚೆಲ್ಲಾಟ ವಾಡುವ ವ್ಯದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.