ಮಹಿಳಾ ಪೇದೆಗಳ ಸಮವಸ್ತ್ರ ಬದಲು

By Web DeskFirst Published Aug 11, 2018, 7:49 AM IST
Highlights

ಮಹಿಳಾ ಕಾನ್‌ಸ್ಟೇಬಲ್‌ಗಳ ಸಮವಸ್ತ್ರ ಬದಲಾವಣೆ ಬಗ್ಗೆಯೂ ಚರ್ಚೆ ನಡೆದಿದೆ. ಇನ್ನು ಮುಂದೆ ಸೀರೆ ಬದಲಿಗೆ ಪ್ಯಾಂಟ್‌, ಶರ್ಟ್‌ ಸಮವಸ್ತ್ರ ನಿಯಮ ಜಾರಿಗೆ ತರುವ ಬಗ್ಗೆ ಪರಿಶೀಲಿಸಲಾಗುತ್ತಿದೆ 

ಮಂಗಳೂರು :  ಕರ್ನಾಟಕ ಪೊಲೀಸ್‌ ಕಾನ್‌ಸ್ಟೇಬಲ್‌ಗಳ ಟೋಪಿ ಬದಲಾವಣೆಗೆ ಚಿಂತನೆ ನಡೆಯುತ್ತಿರುವ ವೇಳೆಯೇ ಮಹಿಳಾ ಕಾನ್‌ಸ್ಟೇಬಲ್‌ಗಳ ಸಮವಸ್ತ್ರ ಬದಲಾವಣೆ ಬಗ್ಗೆಯೂ ಚರ್ಚೆ ನಡೆದಿದೆ. ಇನ್ನು ಮುಂದೆ ಸೀರೆ ಬದಲಿಗೆ ಪ್ಯಾಂಟ್‌, ಶರ್ಟ್‌ ಸಮವಸ್ತ್ರ ನಿಯಮ ಜಾರಿಗೆ ತರುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್‌ ಸುಳಿವು ನೀಡಿದ್ದಾರೆ.

ಭಟ್ಕಳಕ್ಕೆ ಖಾಸಗಿ ಭೇಟಿಗೆ ತೆರಳುವ ಮುನ್ನ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಸೀರೆಯಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿರುವುದರಿಂದ ಸಮವಸ್ತ್ರ ಬದಲಾಯಿಸುವ ಕುರಿತು ಡಿಜಿಪಿ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.

ಔರಾದ್ಕರ್‌ ಶಿಫಾರಸು ಜಾರಿ:  ಪೊಲೀಸರ ಬಡ್ತಿ, ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಔರಾದ್ಕರ್‌ ಸಮಿತಿ ಶಿಫಾರಸಿನಲ್ಲಿ ಕೆಲವೊಂದು ಜಾರಿಯಾಗಿದೆ. 12 ಸಾವಿರ ಬ್ಯಾಕ್‌ಲಾಗ್‌ ಹುದ್ದೆಗಳು ಭರ್ತಿಯಾಗಿವೆ. ಪೊಲೀಸರ ವೇತನ ಪರಿಷ್ಕರಣೆಯಾಗಿದೆ. ಪೊಲೀಸರ ವೇತನವನ್ನು ಬೇರೆ ಸರ್ಕಾರಿ ಇಲಾಖೆಯ ಸಿಬ್ಬಂದಿ ವೇತನಕ್ಕೆ ಸಮಾನಗೊಳಿಸುವ ನಿಟ್ಟಿನಲ್ಲಿ ಸಮಿತಿ ಶಿಫಾರಸನ್ನು ಆರನೇ ವೇತನ ಆಯೋಗ ಜಾರಿ ವೇಳೆ ಅನುಷ್ಠಾನಕ್ಕೆ ತರಲಾಗುವುದು ಎಂದು ಡಾ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

click me!