
ಹುಬ್ಬಳ್ಳಿ(ಜ.19): ಪಾನಮತ್ತ ಪ್ರಯಾಣಿಕನನ್ನು ಮಹಿಳಾ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್ನಿಂದ ಇಳಿಸಿದ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಘಟಕದ ಮಹಿಳಾ ಕಂಡಕ್ಟರ್ ಎಸ್.ಎಂ.ಗರಸಂಗಿ, ಪ್ರಯಾಣಿಕನ ಜತೆ ಜಗಳಕ್ಕಿಳಿದು ಬಸ್`ನಿಂದ ಇಳಿಸಿದ ದೃಶ್ಯವಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಬ್ಬಳ್ಳಿ-ವಿಜಯಪುರ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನನ್ನು ಅವಾಚ್ಯವಾಗಿ ನಿಂದಿಸಿ, ಬಸ್ನಿಂದ ಕೆಳಗಿಳಿಸುವುದನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಟಿಕೇಟ್ ವಿಚಾರದಲ್ಲಿ ಈ ಗಲಾಟೆ ನಡೆದಿದೆ.
ಹಣ ಕೊಟ್ಟಿದ್ದೀನಿ ಅಂತ ಪ್ರಯಾಣಿಕ ವಾದಿಸಿದ್ರೆ, ದುಡ್ಡು ಕೊಟ್ಟಿಲ್ಲ ಅಂತ ನಿರ್ವಾಹಕಿ ಗರಸಂಗಿ ವಾದಿಸುತ್ತಿರೋದು ವಿಡಿಯೋದಲ್ಲಿ ದಾಖಲಾಗಿದೆ.. ಈ ವಿಡಿಯೋ ಸಂಸ್ಥೆ ಅಧಿಕಾರಿಗಳಿಗೂ ತಲುಪಿದೆ. ವಿಭಾಗೀಯ ಸಂಚಾರ ಶಾಖೆ ಮುಖ್ಯಸ್ಥರು, ವಿಡಿಯೋ ತುಣುಕು ಪರಿಶೀಲನೆ ಮಾಡಿದ್ದು, ಈ ಕುರಿತು ಘಟಕ ವ್ಯವಸ್ಥಾಪಕರಿಂದ ವರದಿ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.