
ನವದೆಹಲಿ (ಜ.19): ಪರಮಾಣು ಪೂರೈಕೆದಾರ ದೇಶಗಳ ಸಮೂಹ (ಎನ್’ಎಸ್’ಜಿ)ಯ ಸದಸ್ಯತ್ವ ಪಡೆಯುವ ಪ್ರಯತ್ನವು ಭಾರತದ ಪರಮಾಣು ಪ್ರಸರಣ ತಡೆಯ ಆಧಾರದಲ್ಲೇ ಆಗಿದೆಯೇ ಹೊರತು ಯಾವುದೇ ಉಡುಗೊರೆಯಲ್ಲವೆಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಚೀನಾಕ್ಕೆ ತಿರುಗೇಟು ನೀಡಿದೆ.
ಭಾರತ ಎನ್'ಎಸ್'ಜಿ ಸದಸ್ಯತ್ವ ಪಡೆಯಲು ಚೀನಾ ಅಡ್ಡಿಯಾಗಿದೆ ಎಂಬ ಅಮೆರಿಕದ ನಿಲುವಿನ ವಿರುದ್ಧ ಬೀಜಿಂಗ್ ಅಸಮಾಧಾನ ಹೊರಹಾಕಿತ್ತು. ಎನ್'ಎಸ್'ಜಿ ಸದಸ್ಯತ್ವವು ದೇಶಗಳು ನೀಡಬಹುದಾದ ವಿದಾಯ ಉಡುಗೊರೆಯಲ್ಲ ಎಂದು ಚೀನಾ ಹೇಳಿತ್ತು.
‘‘ಎನ್'ಎಸ್'ಜಿ ಸದಸ್ಯತ್ವ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ನೀಡುವ ವಿದಾಯ ಉಡುಗೊರೆಯಲ್ಲ’’ ಎಂದು ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಹುವಾ ಚುನಿಂಗ್ ಹೇಳಿದ್ದರು.
ಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದಿರುವ ಹಿನ್ನೆಲೆಯಲ್ಲಿ ಚೀನಾವು, ಎನ್’ಎಸ್’ಜಿ ಸದಸ್ಯತ್ವ ಪಡೆಯುವ ಪ್ರಯತ್ನಗಳನ್ನು ವಿರೋಧಿಸುತ್ತಾ ಬಂದಿದೆ. ಭಾರತವು ಎನ್’ಎಸ್’ಜಿ ಸದಸ್ಯತ್ವಕ್ಕೆ ಮನವಿ ಮಾಡಿದ ಬೆನ್ನಲ್ಲೇ ಪಾಕಿಸ್ತಾನವು ಮನವಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.