ರೈಲ್ವೆ ಉದ್ಯೋಗಿಗಳಿಗೆ ಈ ಬಾರಿ ದಸರಾಕ್ಕೆ ಭರಪೂರ ಬಂಪರ್ !

By Web DeskFirst Published Oct 9, 2018, 5:27 PM IST
Highlights

ಗ್ರೂಪ್ ಎ ಮತ್ತು ಬಿ ನೌಕರರು ಹೊರತುಪಡಿಸಿದ ಒಟ್ಟು 12,26 ಲಕ್ಷ ರೈಲ್ವೆ ಉದ್ಯೋಗಿಗಳು ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ  ಬೋನಸ್ ಪಡೆದುಕೊಳ್ಳುತ್ತಿದ್ದಾರೆ. ಆರ್ ಪಿ ಎಫ್ ಹಾಗೂ ಆರ್ ಪಿ ಎಸ್ ಎಫ್ ಉದ್ಯೋಗಿಗಳು  ಬೋನಸ್ಸಿಗೆ ಅರ್ಹರಾಗುವುದಿಲ್ಲ.

ನವದೆಹಲಿ[ಅ.09]: ಭಾರತೀಯ ರೈಲ್ವೆ ಈ ಬಾರಿಯ ದಸರಾ ಹಬ್ಬಕ್ಕೆ ತನ್ನ ನೌಕರರಿಗೆ  ಭರಪೂರ ಬಂಪರ್ ನೀಡುವ ಸಾಧ್ಯತೆಯಿದೆ. 

78 ದಿನಗಳ 18 ಸಾವಿರ ರೂ. ಬೋನಸ್ ವೇತನವನ್ನು ನೀಡಲಾಗುತ್ತಿದ್ದು ಕಳೆದ 6 ವರ್ಷದಿಂದ ಈ ರೀತಿಯ ಕೊಡುಗೆ ನೀಡಲಾಗುತ್ತದೆ. ರೈಲ್ವೆ ಸಂಘಟನೆಗಳೊಂದಿಗೆ  ಮಂಡಳಿ ಮಾತುಕತೆ ನಡೆಸಿದ ನಂತರ ಲಾಭದಾಯಕ ಉತ್ಪನ್ನವನ್ನು ಒಳಗೊಂಡ ಬೋನಸ್ ಅನ್ನು 2017-18 ಸಾಲಿನಲ್ಲಿ ನೀಡಲು ಕೇಂದ್ರ ಸಂಪುಟ ಸಮ್ಮತಿಸಿದೆ ಎಂದು ಇಲಾಖೆಯ ಹಿರಿಯ ಉದ್ಯೋಗಿಯೊಬ್ಬರು ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ.

ಈಗಾಗಲೇ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಾಗಿದ್ದು ಈ ರಾಜ್ಯಗಳ ಉದ್ಯೋಗಿಗಳು ಬೋನಸ್ ಹಣವನ್ನು ಚುನಾವಣೆಯ ನಂತರ ಪಡೆದುಕೊಳ್ಳುವ ಸಾಧ್ಯತೆಯಿದೆ. ಉಳಿದ ರಾಜ್ಯಗಳಿಗೆ ರೈಲ್ವೆ ಇಲಾಖೆಯು ಸಂಪುಟ ಅನುಮತಿ ಪಡೆದು ಕೆಲವು ದಿನಗಳಲ್ಲಿ ಬೋನಸ್ ಕೊಡುಗೆಯನ್ನು ಘೋಷಿಸಲಿದೆ ಎನ್ನಲಾಗಿದೆ.

ಗ್ರೂಪ್ ಎ ಮತ್ತು ಬಿ ನೌಕರರು ಹೊರತುಪಡಿಸಿದ ಒಟ್ಟು 12,26 ಲಕ್ಷ ರೈಲ್ವೆ ಉದ್ಯೋಗಿಗಳು ಪ್ರತಿ ವರ್ಷ ಕಳೆದ 6 ವರ್ಷದಿಂದ ದಸರಾ ಹಬ್ಬದ ಸಂದರ್ಭದಲ್ಲಿ  ಬೋನಸ್ ಪಡೆದುಕೊಳ್ಳುತ್ತಿದ್ದಾರೆ. ಆರ್ ಪಿ ಎಫ್ ಹಾಗೂ ಆರ್ ಪಿ ಎಸ್ ಎಫ್ ಉದ್ಯೋಗಿಗಳು ಬೋನಸ್ಸಿಗೆ ಅರ್ಹರಾಗುವುದಿಲ್ಲ. 

ಕಳೆದ ವರ್ಷ ಭಾರತೀಯ ರೈಲ್ವೆಯು 16 ಸಾವಿರ ಕೋಟಿ ರೂ. ಆದಾಯಗಳಿಸಿದ್ದು 1161 ,ಮಿಲಿಯನ್ ಟನ್ ದಾಖಲೆಯ ಸಾಗಣೆಯನ್ನು ಸಾಗಿಸಿದೆ.. ಈ ಆಧಾರದ ಮೇಲೆ ರೈಲ್ವೆ ಸಂಘಟನೆಗಳು 80 ದಿನಗಳ ಬೋನಸ್ ನೀಡಬೇಕೆಂದು ಆಗ್ರಹಿಸಿದ್ದವು. ಅಂತಿಮವಾಗಿ 78 ದಿನದ ಬೋನಸ್ ನೀಡಲು ಮಂಡಳಿಯು ಒಪ್ಪಿಕೊಂಡಿತು. ಇದರಿಂದ ಇಲಾಖೆಗೆ ಒಟ್ಟು 2 ಸಾವಿರ ಕೋಟಿ ರೂ. ಹಣ ವೆಚ್ಚವಾಗಲಿದೆ ಎನ್ನಲಾಗಿದೆ.

click me!