
ಮುಂಬೈ(ಆ.24): ಲಾರ್ಸನ್ ಆ್ಯಂಡ್ ಟೂರ್ಬೊ (ಎಲ್ ಆ್ಯಂಡ್‌ಟಿ) ಸಂಸ್ಥೆಯ ಆಡಳಿತ ನಿರ್ದೇಶಕ ಅನಿಲ್ ಕುಮಾರ್ ಮಣಿಭಾಯಿ ನಾಯ್ಕ್ ಅವರ ಅಧಿಕಾರಾವಧಿ ಮುಗಿದಿದೆ. ಆದರೆ 52 ವರ್ಷಗಳ ಸುದೀರ್ಘ ಸೇವೆ ಮೂಲಕ, ಸಣ್ಣ ಕಂಪನಿಯೊಂದನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದ ನಾಯ್ಕ್, ತಮ್ಮ ಅಧಿಕಾರ ಹಸ್ತಾಂತರಿಸುತ್ತಿರುವುದಕ್ಕಿಂತಲೂ, ಅವರು ಪಡೆಯುತ್ತಿರುವ ರಜಾ ನಗದೀಕರಣದ ಮೊತ್ತ ಕುತೂಹಲ ಸೃಷ್ಟಿಸಿದೆ.
ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ರಜೆ ಪಡೆದಿದ್ದರಿಂದ, ನಾಯ್ಕ್ ಅವರ ರಜಾ ನಗದೀಕರಣವೇ 32.2 ಕೋಟಿ ರು. ಆಗಲಿದೆ. ಒಟ್ಟು 38.04 ಕೋಟಿ ನಿವೃತ್ತಿ ಪ್ರಯೋಜನ ಪಡೆಯ ಲಿರುವ ನಾಯ್ಕ್, ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ವಾರದ ರಜೆ ಪಡೆದಿದ್ದರು. ಬೃಹತ್ ಮೊತ್ತದ ನಿವೃತ್ತಿ ಸೌಲಭ್ಯಗಳಲ್ಲದೆ, 3.6 ಕೋಟಿ ವೇತನ ಸೇರಿ 2016-17 ರ ಅವಧಿಗೆ ಒಟ್ಟು 78.91 ಕೋಟಿ ಮೊತ್ತ ನಾಯ್ಕ್ ಸ್ವೀಕರಿಸಲಿದ್ದಾರೆ.
ಈ ಹಿಂದೆ ಎಲ್ ಆ್ಯಂಡ್ ಟಿ ಕಂಪನಿಯನ್ನು ರಿಲಯನ್ಸ್ , ಬಿರ್ಲಾ ಸೇರಿದಂತೆ ಹಲವು ಕಂಪನಿಗಳು ಖರೀದಿಯ ಭಾರೀ ಯತ್ನ ವನ್ನು ತಡೆದಿದ್ದು ನಾಯ್ಕ್ ಹೆಗ್ಗಳಿಕೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.