ಕೆಎಸ್ಸಾರ್ಟಿಸಿಗೆ ಒಂದೇ ದಿನ ಬಂಪರ್‌

By Web DeskFirst Published Oct 25, 2018, 8:39 AM IST
Highlights

ಸಾಲು ಸಾಲು ರಜೆಯ ಈ ವೇಳೆ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಭರ್ಜರಿ ಆದಾಯ ತಂದಿವೆ. ಅ.22ರಂದು ಒಂದೇ ದಿನ .18.26 ಕೋಟಿ ಆದಾಯ ಸಂಗ್ರಹವಾಗಿದೆ. ಪ್ರಸಕ್ತ ಸಾಲಿನ ನಿಗಮದ ದಿನವೊಂದರ ಅತ್ಯಧಿಕ ಆದಾಯ ಇದಾಗಿದೆ.

ಬೆಂಗಳೂರು :  ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಿನ್ನೆಲೆಯಲ್ಲಿ ಎದುರಾದ ಸಾಲು ರಜೆಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಭರ್ಜರಿ ಆದಾಯ ತಂದಿವೆ. ಅ.22ರಂದು ಒಂದೇ ದಿನ .18.26 ಕೋಟಿ ಆದಾಯ ಸಂಗ್ರಹವಾಗಿದೆ. ಪ್ರಸಕ್ತ ಸಾಲಿನ ನಿಗಮದ ದಿನವೊಂದರ ಅತ್ಯಧಿಕ ಆದಾಯ ಇದಾಗಿದೆ.

ಸಾಲು ರಜೆಗಳ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದನ್ನು ಮನಗುಂಡು ಕೆಎಸ್‌ಆರ್‌ಟಿಸಿಯು ಪ್ರಯಾಣಿಕರ ಅನುಕೂಲಕ್ಕಾಗಿ ಅ.17ರಿಂದ ಅ.22ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯದ ನಾನಾ ಭಾಗಗಳಿಗೆ 2500 ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಿತ್ತು. ಇದರಲ್ಲಿ ಅ.22ರಂದು ಒಂದೇ ದಿನ 48 ಲಕ್ಷ ಪ್ರಯಾಣಿಕರು ನಿಗಮದ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಇದರಿಂದ .18.26 ಕೋಟಿ ಆದಾಯ ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಅಭಿನಂದಿಸಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌.ಉಮಾಶಂಕರ್‌, ನಿಗಮದ ಎಲ್ಲ ನೌಕರರಿಗೆ ಸಿಹಿ ಹಂಚಲು ಆದೇಶಿಸಿದ್ದಾರೆ.

ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಐಷಾರಾಮಿ ಬಸ್‌ಗಳಾದಿಯಾಗಿ ಒಟ್ಟು 8800 ಬಸ್‌ಗಳಿವೆ. ಈ ಪೈಕಿ ನಿತ್ಯ ಸುಮಾರು ಆರೂವರೆ ಸಾವಿರ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ನಿಗಮದ ಬಸ್‌ಗಳಲ್ಲಿ 29.68 ಲಕ್ಷ ಮಂದಿ ಪ್ರಯಾಣಿಸುತ್ತಿದ್ದು, ದಿನದ ಆದಾಯ .8.82 ಕೋಟಿ ಬರುತ್ತಿದೆ. ಸಾಲು ರಜೆಗಳ ಹಿನ್ನೆಲೆಯಲ್ಲಿ ಅ.17ರಿಂದ 22ರವರೆಗೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ದಿನದ ಆದಾಯ .9 ಕೋಟಿಯಿಂದ .10 ಕೋಟಿವರೆಗೂ ಹೆಚ್ಚಳವಾಗಿ ನಿಗಮಕ್ಕೆ ಉತ್ತಮ ಆದಾಯ ಬಂದಿದೆ. 2018ರ ಮೇ 14ರಂದು ಕೆಎಸ್‌ಆರ್‌ಟಿಸಿ ಇತಿಹಾಸದಲ್ಲಿ ದಿನವೊಂದರ ದಾಖಲೆಯ ಆದಾಯ .19.46 ಕೋಟಿ ಸಂಗ್ರಹವಾಗಿತ್ತು ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

click me!