ಸರಕು ಸಾಗಿಸುವ KSRTC ಬಸ್ ನಲ್ಲಿ ಮೇಕೆ ಕದ್ದು ಸಾಗಾಟ ಮಾಡುತ್ತಿದ್ದ ಕಂಡಕ್ಟರ್ ಹಾಗೂ ಡ್ರೈವರ್
ಹಾವೇರಿ, [ಅ.14] : ಜನರನ್ನು ಸಾಗಿಸುವ ಕೆಎಸ್ ಆರ್ಟಿಸಿ ಬಸ್ಸಿನಲ್ಲಿಯೇ ಕದ್ದ ಮೇಕೆಗಳನ್ನು ಸಾಗಿಸಿದ ಕಂಡಕ್ಟರ್ ಹಾಗೂ ಡ್ರೈವರ್ ಪೊಲೀಸರ ಅತಿಥಿಯಾಗಿದ್ದಾರೆ.
ಶನಿವಾರ ತಡರಾತ್ರಿ ಹಾವೇರಿ ಜಿಲ್ಲೆಯ ಸವಣೂರು ಡೀಪೋದ ಚಾಲಕ, ನಿರ್ವಾಹಕ ಮೇಕೆಗಳನ್ನ ಕದ್ದು ಬಸ್ಸಿನಲ್ಲಿಯೇ ಸಾಗಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ. ಮೇಕೆಗಳನ್ನ ಕದ್ದು ಸಾಗಿಸುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಾರ್ವಜನಿಕರ ಕೈಗೆ ಸಿಕ್ಕಿದ್ದು, ಡ್ರೈವರ್ ಹಾಗೂ ಕಂಡಕ್ಟರ್ ನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿತ್ಯವೂ ಆಹಾರ ಅರಸಿ ಡೀಪೋದತ್ತ ಬರುತ್ತಿದ್ದ ಮೇಕೆಗಳನ್ನು ಕದ್ದು ಬಸ್ಸಿನಲ್ಲಿಯೇ ಸಾಗಿಸುತ್ತಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಕೃತ್ಯದಲ್ಲಿ ಡೀಪೋ ಮೇನೇಜರ್ ಕೈವಾಡದ ಇದೆ ಎಂದು ಶಂಕಿಸಲಾಗಿದೆ.
ನಿತ್ಯವೂ ಮೇಕೆ ಕದ್ದು ಮಾರುತ್ತಿದ್ದ ಸರ್ಕಾರೀ ಖದೀಮರಾದ ಚಾಲಕ ಮತ್ತು ನಿರ್ವಾಹಕನನ್ನು ಸವಣೂರು ಪೊಲೀಸರಿಗೆ ಒಪ್ಪಿಸಲಾಗಿದೆ.