ಶಿವಮೊಗ್ಗ, ಮಂಡ್ಯ ಲೋಕಸಭಾ ಉಪಚುನಾವಣೆಗೆ ಮೈತ್ರಿ ಕ್ಯಾಂಡಿಡೇಟ್ ಫೈನಲ್

By Web DeskFirst Published Oct 14, 2018, 11:46 AM IST
Highlights

ಕೊನೆಗೂ ಮೈತ್ರಿ ಸರ್ಕಾರದ  ಟಿಕೆಟ್ ಹಂಚಿಕೆಯ ಗೊಂದಲಕ್ಕೆ ತೆರೆಬಿದ್ದಿದೆ. ಮಂಡ್ಯ ಹಾಗೂ ಶಿವಮೊಗ್ಗ ಲೋಕಸಭಾ ಉಪಚುನಾವನೆಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದು, ಯಾರಿಗೆ ಮಣೆ ಹಾಕಾಲಾಗಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳುರು, [ಅ.14]: ಕೊನೆಗೂ ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಸಮ್ಮಿಶ್ರ ಸರ್ಕಾರದ ಕ್ಯಾಂಡಿಡೇಟ್ ಫೈನಲ್ ಆಗಿದೆ.

ಶಿವಮೊಗ್ಗ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು,  ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ವಿನಿ ಗೌಡ ಅವರನ್ನು ಕಣಕ್ಕಿಳಿಸುವುದಾಗಿ ನಿನ್ನೆ ಅಷ್ಟೇ ಜೆಡಿಎಸ್ ಪ್ರಕಟಿಸಿತ್ತು. 

ಆದ್ರೆ, ಇಂದು [ಭಾನುವಾರ] ನಡೆದ ಮಹತ್ವದ ಸಭೆಯಲ್ಲಿ ಜೆಡಿಎಸ್ ವರಿಷ್ಠರು ಬೇರೆಯವರಿಗೆ ಟಿಕೆಟ್ ಘೋಷಿಸಿದ್ದಾರೆ. ಇದ್ರಿಂದ ಅಶ್ವಿನಿ ಗೌಡ ಅವರಿಗೆ ಮುಖಭಂಗವಾಗಿದೆ.

ಅಂತಿಮವಾಗಿ ಮಂಡ್ಯ ಲೋಕಸಭಾ ಉಪಚುನಾವಣೆಗೆ ಎಲ್.ಆರ್.ಶಿವರಾಮೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಶಿವಮೊಗ್ಗ ಲೋಕಸಭೆಗೆ ಮಾಜಿ ಶಾಸಕ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷ  ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

click me!