ಬಿಜೆಪಿ ನಾಯಕರ ವಿರುದ್ಧ ಮತ್ತೆ ಈಶ್ವರಪ್ಪ ಮುನಿಸು..?

First Published May 29, 2018, 12:45 PM IST
Highlights

ಬಿಜೆಪಿ ಮುಖಂಡ ಈಶ್ವರಪ್ಪ ಹಾಗೂ ಬಿಜೆಪಿ ನಾಯಕರ ನಡುವಿನ ಮುನಿಸು ಮತ್ತೆ ಸ್ಫೋಟಗೊಂಡಿದೆ. ಇದೀಗ  ಎಂಎಲ್ ಸಿ ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ಈಶ್ವರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಅಸಮಾಧಾನಗೊಂಡ ಅವರು ಇಂದು ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಗೆ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ. 

ಬೆಂಗಳೂರು : ಬಿಜೆಪಿ ಮುಖಂಡ ಈಶ್ವರಪ್ಪ ಹಾಗೂ ಬಿಜೆಪಿ ನಾಯಕರ ನಡುವಿನ ಮುನಿಸು ಮತ್ತೆ ಸ್ಫೋಟಗೊಂಡಿದೆ. ಇದೀಗ  ಎಂಎಲ್ ಸಿ ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ಈಶ್ವರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಅಸಮಾಧಾನಗೊಂಡ ಅವರು ಇಂದು ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಗೆ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ. 

ಎಂಎಲ್ ಸಿಯಾಗಿ ಭಾನುಪ್ರಕಾಶ್ ಮರು ಆಯ್ಕೆಗೆ ಈಶ್ವರಪ್ಪ ಒಲವು ತೋರಿದ್ದು, ಆದರೆ ಭಾನುಪ್ರಕಾಶ್ ಬದಲಿಗೆ ವಕ್ತಾರ ವಾಮನಾಚಾರ್ಯ, ಗೋಮಧುಸೂದನ್, ಅಥವಾ ಸುಬ್ಬ ನರಸಿಂಹ ಅವರನ್ನು ಆಯ್ಕೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಒಲವು ತೋರಿದ್ದಾರೆ ಎನ್ನಲಾಗಿದೆ.  

ಜೂನ್ 15ಕ್ಕೆ ಭಾನುಪ್ರಕಾಶ್ ಅವಧಿ ಮುಕ್ತಾಯವಾಗಲಿದ್ದು, ಭಾನುಪ್ರಕಾಶ್ ಈಶ್ವರಪ್ಪ  ಆಪ್ತರಾಗಿದ್ದಾರೆ.  ಸಂಗ್ಗೊಳ್ಳಿ ರಾಯಣ್ಣ ಬ್ರಿಗೇಡ್ ಚಾಲ್ತಿಯಲ್ಲಿದ್ದಾಗ ಈಶ್ವರಪ್ಪಗೆ ಭಾನುಪ್ರಕಾಶ್ ಸಾಥ್ ನೀಡಿದ್ದು, ಭಾನುಪ್ರಕಾಶ್ ನಡೆಗೆ ಅಂದು  ಯಡಿಯೂರಪ್ಪ ಇರುಸು ಮುರುಸುಗೊಂಡಿದ್ದರು. ಆದ್ದರಿಂದಲೇ ಭಾನುಪ್ರಕಾಶ್ ಮರು ಆಯ್ಕೆ ಮಾಡಲು ಬಿಎಸ್'ವೈಗೆ ಆಸಕ್ತಿ ಇಲ್ಲದ ಕಾರಣ  ಈಶ್ವರಪ್ಪ ಇಂದು ಬಿಜೆಪಿ ಕೋರ್ ಸಭೆಗೆ ಗೈರಾಗುತ್ತಿದ್ದಾರೆ ಎನ್ನಲಾಗಿದೆ. 

click me!