
ಮಡಿಕೇರಿ (ಜ.29): ಎಸ್.ಎಂ.ಕೃಷ್ಣ ರಾಜೀನಾಮೆಯಿಂದ ಕಾಂಗ್ರೆಸ್ ಮುಕ್ತ ರಾಜ್ಯಕ್ಕೆ ಅನುಕೂಲವಾಗಿಲಿದೆ ಎಂದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಒಬ್ಬ ಸಜ್ಜನ ಮತ್ತು ಮುತ್ಸದ್ದಿ ರಾಜಕಾರಣಿ, ಪಕ್ಷದ ನಡೆಯಿಂದ ಜಿಗುಪ್ಸೆಗೊಂಡು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೂ ಕಿಮ್ಮತ್ತಿಲ್ಲ ಎನ್ನುವಂತಾಗಿದೆ. ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಕಾಂಗ್ರೆಸ್ ಈಗ ಕಳಸವಿಲ್ಲದ ಗೋಪುರ:
ಕೃಷ್ಣ ರಾಜೀನಾಮೆಯಿಂದ ಕಾಂಗ್ರೆಸ್’ಗೆ ಹಿನ್ನಡೆ ಆರಂಭವಾಗಿದೆ. ಅವರಿಲ್ಲದ ಪಕ್ಷ ಕಳಸವಿಲ್ಲದ ಗೋಪುರದಂತಾಗಿದೆ ಎಂದು ಶ್ರೀರಂಗಪಟ್ಟಣದಲ್ಲಿ ಕೃಷ್ಣ ಆಪ್ತ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ನೀಡಿದ್ದಾರೆ.
ಅವರ ರಾಜೀನಾಮೆ ದೇಶದ ಮಟ್ಟದಲ್ಲಿ ಕಾರ್ಯಕರ್ತರಿಗೆ ನೋವು ತಂದಿದೆ. ಅವರು ಕಾಂಗ್ರೆಸ್’ಗೆ ಕಳಸದಂತೆ ಇದ್ದರು. ಆ ಕಳಸವೇ ಇಲ್ಲದ ಮೇಲೆ ನಾವು ಏನನ್ನ ನೋಡಿಕೊಂಡು ಆ ಪಕ್ಷದಲ್ಲಿ ಇರಬೇಕು? ಅವರು ಎಲ್ಲಿರುತ್ತಾರೊ ನಾನು ಅಲ್ಲೇ ಇರುತ್ತೇನಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.