ಮೋದಿ ತಿಂದಿದ್ದಾರೆ, ತಿನ್ನಿಸಿಯೂ ಇದ್ದಾರೆ: ದಿನೇಶ್ ಗುಂಡುರಾವ್!

Published : Jul 26, 2018, 04:34 PM IST
ಮೋದಿ ತಿಂದಿದ್ದಾರೆ, ತಿನ್ನಿಸಿಯೂ ಇದ್ದಾರೆ: ದಿನೇಶ್ ಗುಂಡುರಾವ್!

ಸಾರಾಂಶ

ರಫೆಲ್ ಒಪ್ಪಂದ ಹಾಳುಗೆಡವಿದ ಮೋದಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಆರೋಪ ರಫೆಲ್ ಡೀಲ್‌ನಲ್ಲಿ ಭ್ರಷ್ಟಾಚಾರದ ಆರೋಪ ವಿಮಾನ ಬೆಲೆ ಏರಿಸಿ ಭ್ರಷ್ಟಾಚಾರ ಎಸಗಿದ್ದಾರೆ

ಬೆಂಗಳೂರು(ಜು.26): ರಫೆಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಲಾಯನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಆರೋಪಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಆದ ಒಪ್ಪಂದದಂತೆ 108 ವಿಮಾನಗಳು ಎಚ್.ಎ.ಎಲ್ ನಲ್ಲಿ ನಿರ್ಮಾಣ ಆಗಬೇಕು. 18 ವಿಮಾನಗಳನ್ನು ಮಾತ್ರ ಫ್ರಾನ್ಸ್ ನಿಂದ ಖರೀದಿಸಲು ನಿರ್ಧರಿಸಲಾಗಿತ್ತು. ಅಲ್ಲದೇ ಪ್ರತೀ ವಿಮಾನಕ್ಕೆ 521 ಕೋಟಿ ನಿಗದಿಯಾಗಿತ್ತು ಎಂದು ಗುಂಡುರಾವ್ ಹೇಳಿದ್ದಾರೆ.

ಆದರೆ ಪ್ರಧಾನಿ ಮೋದಿ ಈ ಒಪ್ಪಂದವನ್ನು ಮುರಿದಿದ್ದು, ಈಗ ರೆಫಲ್ ಯುದ್ಧ ವಿಮಾನ ಖರೀದಿ ದರವನ್ನು ಬಹಿರಂಗಪಡಿಸುತ್ತಿಲ್ಲ ಎಂದು ದಿನೇಶ್ ಆರೋಪಿಸಿದ್ದಾರೆ. ಮೋದಿ ಫ್ರಾನ್ಸ್ ಗೆ ತೆರಳಿ ೩೬ ವಿಮಾನ ಖರಿದಿಸಲು ತೀರ್ಮಾನಿಸಿದ್ದರು. ಈ ಸಂದರ್ಭದಲ್ಲಿ ಮೋದಿ ಜೊತೆ ರಕ್ಷಣಾ ಸಚಿವರ ಬದಲು ಉದ್ಯಮಿ ಅನಿಲ್ ಅಂಬಾನಿ ಇದ್ದರು ಎಂದು ಗುಂಡುರಾವ್ ಲೇವಡಿ ಮಾಡಿದ್ದಾರೆ.

ಈ ವೇಳೆ ಡೆಸಾಲ್ಟ್ ಕಂಪನಿ ವಿಮಾನದ ದರ ನಿಗದಿಪಡಿಸಿದ್ದು, ಇದರ ಪ್ರಕಾರ ಪ್ರತೀ ವಿಮಾನದ ಬೆಲೆ 1670 ಕೋಟಿ ರೂ. ಆಗುತ್ತದೆ. ಹೀಗಾಗಿ ಮೋದಿ ಮಾಡಿಕೊಂಡ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿರುವುದು ಗೊತ್ತಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು