ದಿನೇಶ್‌ಗೆ ಸಿಕ್ಕ ಮೈತ್ರಿ ಸರ್ಕಾರಕ್ಕೆ ಭಂಗ ತರುವ ಶಾಕಿಂಗ್ ನ್ಯೂಸ್!

By Web DeskFirst Published Aug 27, 2018, 6:41 PM IST
Highlights

ಕೆಪಿಸಿಸಿ ಅಧ್ಯಕ್ಚ ಗಾದಿ ಏರಿದ ಮೇಲೆ ವಿವಿಧ ಜಿಲ್ಲೆಗಳ ಪ್ರವಾಸ ಮಾಡಿದ್ದ ದಿನೇಶ್ ಗುಂಡೂರಾವ್ ಗೆ ಶಾಕಿಂಗ್ ನ್ಯೂಸ್ ವೊಂದು ಎದುರಾಗಿದೆ. ಮುಂದಿನ ದಿನದಲ್ಲಿ ಇದು ಸಮ್ಮಿಶ್ರ ಸರಕಾರಕ್ಕೆ ಭಂಗ ತರುವ ಸಾಧ್ಯತೆಯೂ ಇದೆ. ಏನಪ್ಪಾ ಆ ಸುದ್ದಿ.. ಮುಂದೆ ಓದಿ..

ಬೆಂಗಳೂರು[ಆ.27]  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಗೆ ಬಿಗ್ ಶಾಕ್ ಕಾರ್ಯಕರ್ತರು ಕೊಟ್ಟ ಮಾಹಿತಿಗೆ ಸ್ವತಃ ಕೆಪಿಸಿಸಿ ಅಧ್ಯಕ್ಷರು ಬೆಚ್ಚಿ ಬಿದ್ದಿದ್ದಾರೆ. ಶಾಕಿಂಗ್ ಮಾಹಿತಿಯನ್ನು ದಿನೇಶ್ 
ಶೀಘ್ರವೇ ಹೈಕಮಾಂಡ್ ಗೆ ರವಾನೆ ಮಾಡಲಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿಷ್ಟು ದಿನ ಕೆಳಹಂತದಲ್ಲಿ ಪಕ್ಷಕ್ಕೆ ಮಾರಕವಾಗಲಿದೆ. ವಿಧಾನಸೌಧದಲ್ಲಿ ಮಾಡಿಕೊಂಡ ಮೈತ್ರಿಗೆ ತಳಮಟ್ಟದಲ್ಲಿ ಬೆಂಬಲವಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಎರಡನೇ ದರ್ಜೆ ಕಾರ್ಯಕರ್ತರಾಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಾಗದಿದ್ದರೆ ಪಕ್ಷಕ್ಕೆ ಮಾರಕ. ಜೆಡಿಎಸ್ ಕಾರ್ಯಕರ್ತರ ಅಬ್ಬರದಿಂದ ಕೈ ಕಾರ್ಯಕರ್ತರು ಸೊರಗಿದ್ದಾರೆ ಎಂಬ ಅಂಶಗಳು ದಿನೇಶ್ ಗೆ ಗೊತ್ತಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಹೋದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕಷ್ಟ.  ರಾಜಕೀಯವಾಗಿ ಪಕ್ಷದ ಕಾರ್ಯಕರ್ತರಿಗೆ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ.
ಎಲ್ಲವನ್ನೂ ಅನುಸರಿಸಿಕೊಂಡು ಹೋಗಿ ಅನ್ನೋ ಹೈಕಮಾಂಡ್ ಸೂಚನೆ ಸರಿಯಿಲ್ಲ.
ಸ್ಥಳೀಯವಾಗಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ರಾಜ್ಯ ನಾಯಕರು ಗೌರವಿಸಬೇಕು ಎಂಬ ಮನವಿಯೂ ದಿನೇಶ್ ಗೆ ತಲುಪಿದೆ.

ಇತ್ತೀಚೆಗೆ ಬೆಳಗಾವಿ, ಬೀದರ್, ಬಿಜಾಪುರ, ಮೈಸೂರು, ಹಾಸನ, ಮಂಡ್ಯ ಪ್ರವಾಸ ಮಾಡಿದ್ದ ಗುಂಡುರಾವ್ಗೆ ಈ ಆತಂಕಕಾರಿ ಮಾಹಿತಿ ಸಿಕ್ಕಿದೆ.  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗೋ ಅತಂಕವೂ ಇದರಿಂದ ಉಂಟಾಗಿದೆ.

ಈಗಾಗಲೇ ಕಾರ್ಯಕರ್ತರ ಮನದಾಳವನ್ನು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಗೆ ತಲುಪಿಸಿದ ದಿನೇಶ್ ಗುಂಡೂರಾವ್ ಮುಂದೆ ಏನೇನು ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ಚರ್ಚೆ ಮಾಡಿದ್ದಾರೆ.

click me!