
ನವದೆಹಲಿ (ಆ.27) ದೇಶದಲ್ಲಿ ರಕ್ಷಾ ಬಂಧನ ಸಂಭ್ರಮಾಚರಣೆ ನಡೆಯುತ್ತಿರುವ ನಡುವೆ, ಪ್ರಧಾನಿ ನರೇಂದ್ರ ಮೋದಿ ಯವರಿಗೆ ಪಾಕಿಸ್ತಾನಿ ಮೂಲದ ಸಹೋದರಿಯೊಬ್ಬರು ರಾಖಿ ಕಟ್ಟಿಸಂಭ್ರಮಿಸಿದ್ದಾರೆ.
ಕಳೆದ 22-23 ವರ್ಷಗಳಿಂದ ಖಮರ್ ಮೊಹ್ಸೀನ್ ಶೇಖ್ ಮೋದಿಗೆ ರಾಖಿ ಕಟ್ಟುತ್ತಿದ್ದರು. ಈ ಬಾರಿಯೂ ಭಾನುವಾರ ಖಮರ್ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ರಾಖಿ ಕಟ್ಟಿದ್ದಾರೆ. ‘ನರೇಂದ್ರ ಭಾಯಿಯವರಿಗೆ 22-23 ವರ್ಷಗಳಿಂದಲೂ ರಾಖಿ ಕಟ್ಟುತ್ತಿದ್ದೇನೆ. ಈ ವರ್ಷ ಪ್ರಧಾನಿಯವರು ಬ್ಯುಸಿ ಇರಬಹುದೆಂದು ಅಂಕೊಂಡಿದ್ದೆ. ಆದರೆ,ಎರಡು ದಿನಗಳ ಹಿಂದೆ ಅವರೇ ನನಗೆ ಕರೆ ಮಾಡಿದರು. ನಾನು ತುಂಬಾ ಸಂತೋಷದಿಂದ ರಕ್ಷಾ ಬಂಧನಕ್ಕೆ ಸಿದ್ಧಳಾದೆ’ ಎಂದು ಖಮರ್ ಹೇಳಿದ್ದಾರೆ.
ಖಮರ್ ವಿವಾಹವಾದ ಬಳಿಕ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿ, ಇಲ್ಲೇ ನೆಲೆಸಿದ್ದಾರೆ. ಮೋದಿ ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾಗಿಂದ ರಕ್ಷಾ ಬಂಧನ ಕಟ್ಟುತ್ತಿದ್ದಖಮರ್, ಅವರು ಪ್ರಧಾನಿಯಾದ ನಂತರವೂ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.