ಹಿಂದುಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ‘ಕೊರಿಯನ್ ದಿವಸ’ ಆಚರಣೆ

By Web DeskFirst Published Nov 1, 2019, 7:21 PM IST
Highlights
  • ‘ಅರಿರಂಗ್’ ಎಂಬ ಧ್ಯೇಯದಡಿ  ಹಿಂದುಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್ (HIS)ನಲ್ಲಿ ಕೊರಿಯನ್ ದಿವಸ ಆಚರಣೆ
  • ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊರಿಯಾದ ಡೆಪ್ಯೂಟಿ ಕಾನ್ಸುಲ್ ಜನರಲ್ ಎಂ ಹಾಂಗ್ ಯಪ್ ಲೀ
  • ಶಾಲಾ ಮಕ್ಕಳಿಂದ ಕೊರಿಯಾ ಸಂಸ್ಕೃತಿ, ಕಲೆಯನ್ನು ಬಿಂಬಿಸುವ ಹಾಡು, ನೃತ್ಯ ಮತ್ತು ನಾಟಕ

‘ದಿ ಲ್ಯಾಂಡ್ ಆಫ್ ಮಾರ್ನಿಂಗ್ ಕಾಮ್’ ಎಂದು ಕರೆಯಲ್ಪಡುವ ಕೊರಿಯಾ ದೇಶವು ಸಂಸ್ಕೃತಿ, ಮೌಲ್ಯಗಳು ಮತ್ತು ನಂಬಿಕೆಗಳ  ನೆಲೆಗಟ್ಟಿನ ಮೇಲೆ ನಿಂತಿದೆ.

ಗಿಂಡಿಯಲ್ಲಿರುವ ಹಿಂದುಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್ (HIS) ಅಕ್ಟೋಬರ್ 16ರಂದು ‘ಅರಿರಂಗ್’ ಎಂಬ ಧ್ಯೇಯದಡಿ ಕೊರಿಯನ್ ದಿವಸವನ್ನು ಆಚರಿಸಿತು.

ರಿಪಬ್ಲಿಕ್ ಆಫ್ ಕೊರಿಯಾದ ಡೆಪ್ಯೂಟಿ ಕಾನ್ಸುಲ್ ಜನರಲ್ ಎಂ ಹಾಂಗ್ ಯಪ್ ಲೀ ಸಮಾರಂಭದಲ್ಲಿ ಭಾಗವಹಿಸಿದರು. ಕೊರಿಯನ್ ಸ್ನೇಹಿತರ ಜೊತೆ ಸೇರಿ ಹಿಂದುಸ್ತಾನ್ ಇಂಟರ್ ನ್ಯಾಷನಲ್ ಶಾಲಾ ಮಕ್ಕಳು ಅಲ್ಲಿನ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.

ಹಿಂದುಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ  ಕಿಂಡರ್ ಗಾರ್ಥನ್‌ನಿಂದ ಹಿಡಿದು 6ನೇ ತರಗತಿವರೆಗೆ ಗಣನೀಯ ಸಂಖ್ಯೆಯಲ್ಲಿ ಕೊರಿಯಾ ದೇಶದ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲಾ ಸಮುದಾಯದ ಅವಿಭಾಜ್ಯ ಅಂಗವಾಗಿದ್ದಾರೆ.

ಕೊರಿಯನ್ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುವ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು HIS ವಿದ್ಯಾರ್ಥಿಗಳೇ ಎಂಬುವುದು ವಿಶೇಷ. ಕೊರಿಯಾ ದೇಶದ ಜಾನಪದ ಹಾಡು ‘ಅರಿರಂಗ್’ ಸಭಿಕರನ್ನು ಮಂತ್ರಮುಗ್ಧಗೊಳಿಸಿತು. 

ಮನಸೂರೆಗೊಳಿಸುವ ಸಂಗೀತದೊಂದಿಗೆ ಕೊರಿಯಾದ ಸಾಂಪ್ರದಾಯಿಕ ಬೀಸಣಿಕೆ ನೃತ್ಯಕ್ಕೆ ವಿದ್ಯಾರ್ಥಿಗಳು ಹಾಕಿದ ಹೆಜ್ಜೆ ಗಮನಸೆಳೆಯಿತು. ಕೊರಿಯಾ ಜನಮಾನಸದ ಭಾಗವಾಗಿರುವ ’ಮೊಲ ಮತ್ತು ಆಮೆ’ಯ ಕಥೆಯಾಧರಿತ ನಾಟಕವು ಪ್ರೇಕ್ಷಕರ ಮನರಂಜಿಸಿತು.

ವಿದ್ಯಾರ್ಥಿ ಮತ್ತು ಶಿಕ್ಷಕ ವೃಂದದಲ್ಲಿ ‘ಜಾಗತಿಕ ಮನೋಭಾವ’ವನ್ನು  ಬೆಳೆಸುವ ಮೂಲಕ ವಿದ್ಯಾರ್ಥಿಗಳನ್ನು ‘ಜಾಗತಿಕ ಪ್ರಜೆ’ಯನ್ನಾಗಿ ರೂಪಿಸುವ HISನ ಪ್ರಯತ್ನ ಮುಂದುವರಿಯಲಿದೆ. 

ಕೊರಿಯನ್ ಸ್ನೇಹಿತರ ಜೊತೆಗೆ ಕೊರಿಯನ್ ದಿನವನ್ನು ಆಚರಿಸುವ ಮೂಲಕ ಸ್ಥಳೀಯ ವಿದ್ಯಾರ್ಥಿಗಳಿಗೆ  ಆ ದೇಶವಾಸಿಗಳ ಅದಮ್ಯ ಚೈತನ್ಯವನ್ನು ಅರಿಯುವ ಅವಕಾಶ ಸಿಕ್ಕಂತಾಯಿತು.   

ಕೊರಿಯನ್ ದಿವಸ’ ಆಚರಣೆಯ ಹೈಲೈಟ್ಸ್ ಇಲ್ಲಿದೆ: 

"

 

click me!