
ಕೋಲ್ಕತ್ತಾ (ಡಿ. 24): 20 ನೇ ಮಹಡಿಯ ಕಟ್ಟಡದಿಂದ ಜಿಗಿದರೂ ಪ್ರಾಣಾಪಾಯದಿಂದ ಪಾರು ಮಾಡುವಂಥ ವಿಶೇಷ ಹಾಸಿಗೆಯು ಇದೀಗ ಪಶ್ಚಿಮ ಬಂಗಾಳದ ಕೋಲ್ಕತ್ತಾ ವಿಪತ್ತು ನಿರ್ವಹಣಾ ತಂಡಕ್ಕೆ ಸೇರ್ಪಡೆಯಾಗಿದೆ. ಈ ಮೂಲಕ ಕೋಲ್ಕತ್ತಾವು ಇಂಥ ವಿಶೇಷ ಹಾಸಿಗೆ ಹೊಂದಿದ ದೇಶದ ಮೊದಲ ನಗರವಾಗಿ ಹೊರ ಹೊಮ್ಮಿದೆ.
ಕೋಲ್ಕತ್ತಾವು ಹಳೇ ನಗರವಾಗಿರುವುದರಿಂದ, ಯಾವುದೇ ತುರ್ತು ಸಂದರ್ಭಗಳಲ್ಲಿ ಅತ್ಯಾಧುನಿಕ ಸಲಕರಣೆಗಳು ಮತ್ತು ದೊಡ್ಡ ದೊಡ್ಡ ಏಣಿಗಳ ಬಳಕೆ ಸಾಧ್ಯವಿಲ್ಲ. ಹೀಗಾಗಿ ಈ ವಿಶೇಷ ಹಾಸು ಹೆಚ್ಚು ಮಹತ್ವ ಪಡೆದಿದೆ. ಯಾವುದೇ ದುರ್ಘಟನೆ ನಡೆದ ಕಟ್ಟಡದಲ್ಲಿ 4 ಜನರ ತಂಡ ಕೇವಲ 80 ಸೆಕೆಂಡ್‌ಗಳಲ್ಲಿ ಈ ವಿಶೇಷ ಹಾಸನ್ನು ರಕ್ಷಣಾ ಕಾರ್ಯಾ ಚರಣೆಗೆ ಬಳಸಬಹು ದಾಗಿದೆ. ಅಗ್ನಿ ಆಕಸ್ಮಿಕದಂಥ ಸಂದರ್ಭದಲ್ಲಿ ಕಟ್ಟಡದಿಂದ ಮೇಲಿಂದ ಜಿಗಿಯುವವರ ಪ್ರಾಣ ರಕ್ಷಣೆಗೆ ಇದು ಸಹಕಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.