(Video)ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳು ಸಾವು! ರಹಸ್ಯ ಕಾರ್ಯಾಚರಣೆಯಲ್ಲಿ ‘ಬಂಡವಾಳ’ ಬಯಲು!

By Suvarna Web DeskFirst Published Aug 23, 2017, 11:00 AM IST
Highlights

ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ತವರು ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಮರಣಾ ನಡೆಯುತ್ತಿದೆ. ನಿನ್ನೆ ಒಂದೇ ದಿನದಲ್ಲಿ ಮೂರು ಹಸುಗೂಸು ಮಕ್ಕಳ ಮೃತಪಟ್ಟಿದ್ದು ಆಸ್ಪತ್ರೆಯಲ್ಲಿರುವ ಬಾಣಂತಿಯರು ಹಾಗೂ ಮಕ್ಕಳ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಹದಿನೈದು ದಿನಗಳಲ್ಲಿ ಹತ್ತಕ್ಕೂ ಹೆಚ್ಚು ನವಜಾತ ಶಿಶುಗಳು ಮೃತಪಟ್ಟಿರುವ ಘಟನೆ ಕೋಲಾರ ಸರ್ಕಾರಿ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರನಿಗಾ ಘಟಕದಲ್ಲಿ ನಡೆದಿದೆ.

ಕೋಲಾರ(ಆ.23): ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ತವರು ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಮರಣಾ ನಡೆಯುತ್ತಿದೆ. ನಿನ್ನೆ ಒಂದೇ ದಿನದಲ್ಲಿ ಮೂರು ಹಸುಗೂಸು ಮಕ್ಕಳ ಮೃತಪಟ್ಟಿದ್ದು ಆಸ್ಪತ್ರೆಯಲ್ಲಿರುವ ಬಾಣಂತಿಯರು ಹಾಗೂ ಮಕ್ಕಳ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಹದಿನೈದು ದಿನಗಳಲ್ಲಿ ಹತ್ತಕ್ಕೂ ಹೆಚ್ಚು ನವಜಾತ ಶಿಶುಗಳು ಮೃತಪಟ್ಟಿರುವ ಘಟನೆ ಕೋಲಾರ ಸರ್ಕಾರಿ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರನಿಗಾ ಘಟಕದಲ್ಲಿ ನಡೆದಿದೆ.

ಅಮಾಯಕ ಶಿಶುಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ಆದ್ರೆ ಜಿಲ್ಲಾಸ್ಪತ್ರೆಯ ಮೇಲ್ವಿಚಾರಕ  ಡಾ.ಶಿವಕುಮಾರ್​, ಸೀರಿಯಸ್​ ಇದ್ದರೆ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಕಳುಹಿಸುತ್ತೇವೆ. ಹೊಸ  ವೆಂಟಿಲೇಟರ್​ ಕೇಳಿದ್ದೇವೆ, ಶೀಘ್ರವೇ ಬರುವ ಸಾಧ್ಯತೆ ಇದೆ.

Latest Videos

ಶಿಶುಗಳ ಸಾವಿಗೆ ವೆಂಟಿಲೇಟರ್​ ಕಾರಣವಲ್ಲ  ಅಂತ  ತಮ್ಮ  ಸಿಬ್ಬಂದಿ  ಮೇಲಿನ ಆರೋಪ  ತಳಿಹಾಕಿದ್ರು. ಇನ್ನು ಆ ಆಸ್ಪತ್ರೆಯಲ್ಲಿ ಇರುವ ಚಿತ್ರಣ ಸ್ಥಿತಿಗತಿಯ ಎನ್​ಐಸಿಯುನಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸುವರ್ಣ ನ್ಯೂಸ್ ಕಾರ್ಯಾಚರಣೆ ಮಾಡುವ ಮೂಲಕ ಆಸ್ಪತ್ರೆ ಬಂಡವಾಳ ಬಯಲು ಮಾಡಿದೆ.

click me!