ಕೆಕೆಆರ್ ಪ್ರಮಾದ: ಶಾರೂಖ್'ಗೆ ಇಡಿ ಸಮಸ್ಯೆ

By Suvarna Web DeskFirst Published Jul 20, 2017, 9:08 PM IST
Highlights

ಜಾರಿ ನಿರ್ದೇಶನಾಲಯ ನಡೆಸಿದ ತನಿಖೆ ವೇಳೆಯಲ್ಲಿ ಇದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್'ನಲ್ಲಿ ಜಾರಿ ನಿರ್ದೇಶನಾಲಯ ಶಾರುಖ್‌, ಅವರ ಪತ್ನಿ ಗೌರಿ ಖಾನ್, ನಟಿ ಜೂಹಿ ಚಾವ್ಲಾ ಸೇರಿದಂತೆ ಹಲವರಿಗೆ ಶೋಕಾಸ್ ನೋಟಿಸ್ ನೀಡಿತ್ತು.

ನವದೆಹಲಿ(ಜು.20):ಕೆಕೆಆರ್ ತಂಡದ ಷೇರುಗಳನ್ನು ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘಿಸಿ ಷೇರುಗಳನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.23ರಂದು ಖುದ್ದು ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕೆಕೆಆರ್ ತಂಡದ ಸಹ ಮಾಲೀಕ, ನಟ ಶಾರುಖ್ ಖಾನ್‌ಗೆ ಸಮನ್ಸ್ ನೀಡಿದೆ.

ನೈಟ್ ರೈಡರ್ಸ್‌ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಕೆಆರ್‌ಎಸ್‌ಪಿಎಲ್)ನ ಷೇರುಗಳನ್ನು ಮಾರಿಷಸ್ ಮೂಲದ ಕಂಪನಿಗೆ ನೈಜ ಮೌಲ್ಯಕ್ಕಿಂತ ಕಡಿಮೆ ಮೌಲ್ಯಕ್ಕೆ ಮಾರಾಟ ಮಾಡಲಾಗಿತ್ತು. ಇದರಿಂದ ದೇಶದ ಬೊಕ್ಕಸಕ್ಕೆ 73.6 ಕೋಟಿ ರೂ. ನಷ್ಟ ಉಂಟಾಗಿತ್ತು. ಜಾರಿ ನಿರ್ದೇಶನಾಲಯ ನಡೆಸಿದ ತನಿಖೆ ವೇಳೆಯಲ್ಲಿ ಇದು ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್'ನಲ್ಲಿ ಜಾರಿ ನಿರ್ದೇಶನಾಲಯ ಶಾರುಖ್‌, ಅವರ ಪತ್ನಿ ಗೌರಿ ಖಾನ್, ನಟಿ ಜೂಹಿ ಚಾವ್ಲಾ ಸೇರಿದಂತೆ ಹಲವರಿಗೆ ಶೋಕಾಸ್ ನೋಟಿಸ್ ನೀಡಿತ್ತು.

click me!