
ಬೆಂಗಳೂರು(ಡಿ.15): ಇದು ಬೆಂಗಳೂರು ಅಭಿವೃದ್ಧಿ ಮಾಡುತ್ತೀನಿ ಎಂದು ಸಂಪುಟಕ್ಕೆ ಮರು ಸೇರ್ಪಡೆಗೊಂಡಿರುವ ಸಚಿವ ಕೆ.ಜೆ ಜಾರ್ಜ್ ದೌಲತ್ತು, ಧಿಮಾಕಿನ ಸುದ್ದಿ, ಇದನ್ನು ನೋಡಿದರೆ ಇದು ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರತ್ವವೋ ಎಂಬ ಪ್ರಶ್ನೆ ಮೂಡುವುದಂತೂ ಸತ್ಯ.
ಜಾರ್ಜ್ಗಾಗಿ 1 ತಿಂಗಳು ಕಾದು ಕುಳಿತಿರುವ ಬಿಬಿಎಂಪಿ
ಬಿಬಿಎಂಪಿ ವತಿಯಿಂದ ಕಸ ಕ್ಲೀನ್ ಮಾಡುವ 32 ಸಾವಿರ ಪೌರ ಕಾರ್ಮಿಕರಿಗೆ ಉಚಿತ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮಕ್ಕೆ , ತಿಂಗಳ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಆದರೆ, ಇಲ್ಲಿವರೆಗೂ ಉಚಿತ ಬಿಸಿಯೂಟದ ರುಚಿ ನೋಡೋ ಭಾಗ್ಯ ಪೌರಕಾರ್ಮಿಕರಿಗೆ ಸಿಕ್ಕಿಲ್ಲ. ಅದಕ್ಕೆ ಕಾರಣ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್.
ಬಿಸಿಯೂಟ ಭಾಗ್ಯಕ್ಕೆ ಜಾರ್ಜ್ ಪರ್ಮೀಷನ್ ಬೇಕೆ ಬೇಕಂತೆ
ಯೋಜನೆ ಪ್ರಾರಂಭಿಸಲು ಬಿಬಿಎಂಪಿಗೆ ಸಚಿವ ಜಾರ್ಜ್ ಅವರ ಪರ್ಮಿಶನ್ ಬೇಕಂತೆ. ಆದರೆ, ಜಾರ್ಜ್ ಸಾಹೇಬ್ರಿಗೆ ಮಾತ್ರ ಬಿಸಿಯೂಟದ ಕಾರ್ಯಕ್ರಮ ಉದ್ಘಾಟನೆ ಮಾಡಲು ಸಮಯವೇ ಇಲ್ಲವಂತೆ. ಇತ್ತ ಸಚಿವರೇ ಬರಲಿ ಎಂದು ಕಳೆದ ಒಂದು ತಿಂಗಳಿಂದಲೂ ಬಿಬಿಎಂಪಿ ಕಾಯುತ್ತಿದೆ.
ಬಿಸಿಯೂಟ ಯೋಜನೆಗಾಗಿ 3 ತಿಂಗಳಿಗೆ 18 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. 600 ಬಿಸಿಯೂಟದ ಪಾಯಿಂಟ್'ಗಳನ್ನ ಇಸ್ಕಾನ್ ಗುರುತಿಸಿದೆ. ಇಷ್ಟೇಲ್ಲಾ ತಯಾರಿ ಮಾಡಿಕೊಂಡಿರುವ ಬಿಬಿಎಂಪಿ ಪೌರಕಾರ್ಮಿಕರಿಗೆ ಬಿಸಿಯೂಟ ಪ್ರಾರಂಭಿಸಲು ಜಾರ್ಜ್ ಅಪ್ಪಣೆ ಯಾಕೆ ಕೇಳುತ್ತಿದೆ ಎಂಬುವುದೇ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಪೌರ ಕಾರ್ಮಿಕರ ಪಾಲಿಗೆ ಬಿಡಿಯೂಟ ಯೋಜನೆ ದೇವರು ಕೊಟ್ಟರು ಪೂಜಾರಿ ವರಕೊಟ್ಟಿಲ್ಲ ಎನ್ನುವ ಹಾಗಾಗಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.