ನಾನೂ ಸಿಬಿಐ ವರದಿಗೆ ಕಾಯ್ತಿದ್ದೆನೆ: ಜಾರ್ಜ್

Published : Nov 14, 2017, 10:28 AM ISTUpdated : Apr 11, 2018, 12:36 PM IST
ನಾನೂ ಸಿಬಿಐ ವರದಿಗೆ ಕಾಯ್ತಿದ್ದೆನೆ: ಜಾರ್ಜ್

ಸಾರಾಂಶ

ನಾನೂ ಸಹ ಸಿಬಿಐ ವರದಿಗೆ ಕಾತುರನಾಗಿದ್ದೇನೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಸೋಮವಾರ ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನನ್ನು ತಪ್ಪಿತಸ್ಥನಾಗಿ ಬಿಂಬಿಸಲು ಬಿಜೆಪಿ ಯವರು ತುಂಬಾ ಆತುರ ಪಡುತ್ತಿದ್ದಾರೆ. ಅವರ ಬಳಿ ಇರುವ ದಾಖಲೆಗಳನ್ನು ಸಿಬಿಐಗೆ ನೀಡಿ ಅವರ ಆರೋಪ ಸಾಬೀತುಪಡಿಸಿ ಎಂದು ತಿರುಗೇಟು ನೀಡಿದರು.

ವಿಧಾನಪರಿಷತ್: ನಾನೂ ಸಹ ಸಿಬಿಐ ವರದಿಗೆ ಕಾತುರನಾಗಿದ್ದೇನೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಸೋಮವಾರ ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನನ್ನು ತಪ್ಪಿತಸ್ಥನಾಗಿ ಬಿಂಬಿಸಲು ಬಿಜೆಪಿ ಯವರು ತುಂಬಾ ಆತುರ ಪಡುತ್ತಿದ್ದಾರೆ. ಅವರ ಬಳಿ ಇರುವ ದಾಖಲೆಗಳನ್ನು ಸಿಬಿಐಗೆ ನೀಡಿ ಅವರ ಆರೋಪ ಸಾಬೀತುಪಡಿಸಿ ಎಂದು ತಿರುಗೇಟು ನೀಡಿದರು.

ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಸತ್ಯಾಂಶ ಹೊರಗಡೆ ಬರಲಿ. ಯಾವುದೇ ಕೋರ್ಟ್ ನನ್ನನ್ನು ತಪ್ಪಿತಸ್ಥ ಎಂದು ಹೇಳಿಲ್ಲ. ಸುಪ್ರೀಂ ಕೋರ್ಟ್ ಕೂಡ ಅಪರಾಧದ ಸ್ವರೂಪ ಸೇರಿದಂತೆ ಯಾವ ನಿರ್ದಿಷ್ಟ ಅಂಶಗಳ ಬಗ್ಗೆಯೂ ಹೇಳಿಲ್ಲ. ನೀವು (ಬಿಜೆಪಿ) ವಿನಾಕಾರಣ ನನ್ನನ್ನು ತಪ್ಪಿತಸ್ಥನೆಂದು, ಕೊಲೆಗಡುಕ ಎಂದು ಆರೋಪ ಮಾಡುತ್ತಿದ್ದೀರಿ. ಇದು ಸದನವೇ ಹೊರತು ನ್ಯಾಯಾಲಯವಲ್ಲ. ನಿಮ್ಮ ಬಳಿ ಸಾಕ್ಷ್ಯಾಧಾರ ಮತ್ತಿತರ ದಾಖಲೆಗಳು ಇದ್ದರೆ ನಿಮ್ಮದೇ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಸಿಬಿಐಗೆ ಕೊಡಿ. ಅವರು ವರದಿ ಕೊಡಲಿ ಎಂದು ಸವಾಲು ಹಾಕಿದರು.

3 ತಿಂಗಳಲ್ಲಿ ವರದಿ ಕೊಡಲು ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿದೆ. ಎರಡು ತಿಂಗಳ ಮಟ್ಟಿಗೆ ತಡೆದುಕೊಳ್ಳಿ. ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನನಗೂ ಇದೆ. ನಿಮ್ಮ ಸಿಬಿಐ ಬಗ್ಗೆಯೇ ನಂಬಿಕೆ ಇಲ್ಲದ ಹಾಗೆ ಆಡಬೇಡಿ ಎಂದು ಜಾರ್ಜ್ ಹೇಳಿದರು.

ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ.ರವಿ ಆತ್ಮಹತ್ಯೆ ವಿಚಾರದಲ್ಲೂ ನನ್ನದೇ ತಪ್ಪು ಎಂದು ಬಿಜೆಪಿಯವರು ಬಿಂಬಿಸಲು ಯತ್ನಿಸಿದಿರಿ ಎಂದು ಚಾಟಿ ಬೀಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು