ಬಯಲು ಶೌಚ ತಡೆಯದ ಗ್ರಾಮಕ್ಕೆ ಉಚಿತ ಅಕ್ಕಿ ಇಲ್ಲ : ಆದೇಶ ವಾಪಸ್

Published : Apr 29, 2018, 09:29 AM IST
ಬಯಲು ಶೌಚ ತಡೆಯದ ಗ್ರಾಮಕ್ಕೆ ಉಚಿತ ಅಕ್ಕಿ ಇಲ್ಲ : ಆದೇಶ ವಾಪಸ್

ಸಾರಾಂಶ

ಗ್ರಾಮಗಳು ಬಯಲು ಶೌಚ ಮುಕ್ತ ಮತ್ತು ತ್ಯಾಜ್ಯ ಮುಕ್ತವಾಗದಿದ್ದಲ್ಲಿ, ಗ್ರಾಮಗಳಿಗೆ ನೀಡುವ ಉಚಿತ ಅಕ್ಕಿ ವಿತರಣೆ ರದ್ದು ಪಡಿಸಲಾಗುತ್ತದೆ ಎಂಬ ಆದೇಶವೊಂದನ್ನು ಪಾಂಡಿಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಜಾರಿಗೊಳಿಸಿದ್ದು, ಬಳಿಕ ವಾಪಸ್ ಪಡೆದಿದ್ದಾರೆ.

ಪಾಂಡಿಚೇರಿ: ಗ್ರಾಮಗಳು ಬಯಲು ಶೌಚ ಮುಕ್ತ ಮತ್ತು ತ್ಯಾಜ್ಯ ಮುಕ್ತವಾಗದಿದ್ದಲ್ಲಿ, ಗ್ರಾಮಗಳಿಗೆ ನೀಡುವ ಉಚಿತ ಅಕ್ಕಿ ವಿತರಣೆ ರದ್ದು ಪಡಿಸಲಾಗುತ್ತದೆ ಎಂಬ ಆದೇಶವೊಂದನ್ನು ಪಾಂಡಿಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಜಾರಿಗೊಳಿಸಿದ್ದು, ಬಳಿಕ ವಾಪಸ್ ಪಡೆದಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿ ಅರ್ಧದಷ್ಟುಜನ ಸಂಖ್ಯೆ ಉಚಿತ ಅಕ್ಕಿ ಫಲಾನುಭವಿಗಳಾಗಿದ್ದಾರೆ. ಗ್ರಾಮಗಳು ಸ್ವಚ್ಛವಾಗಿವೆ ಎಂದು ಸ್ಥಳೀಯ ಶಾಸಕರು ಮತ್ತು ಗ್ರಾಮ ಪಂಚಾಯತ್‌ ಆಯುಕ್ತರು ಜಂಟಿ ದೃಢೀಕರಣ ನೀಡಿದಲ್ಲಿ ಮಾತ್ರ ಉಚಿತ ಅಕ್ಕಿ ವಿತರಿಸಲಾಗುತ್ತದೆ ಎಂದು ಬೇಡಿ ಆದೇಶದಲ್ಲಿ ತಿಳಿಸಲಾಗಿದೆ.

ಈ ಕುರಿತು ಅವರು ಮುಖ್ಯಮಂತ್ರಿ ನಾರಾಯಣಸಾಮಿಗೆ ಪತ್ರ ಬರೆದಿದ್ದಾರೆ. ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮಗಳ ಶುಚಿತ್ವಕ್ಕಾಗಿ ನಡೆಸುತ್ತಿರುವ ಪ್ರಯತ್ನಗಳು ನಿಧಾನವಾಗುತ್ತಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ವಾರಗಳೊಳಗೆ ಗ್ರಾಮಗಳನ್ನು ಸ್ವಚ್ಛ ಮಾಡಬೇಕು ಎಂದು ಅವರು ಗಡುವು ಕೂಡ ನೀಡಿದ್ದಾರೆ. ಆದರೆ ಕಿರಣ್‌ ಬೇಡಿ ಆದೇಶಕ್ಕೆ ಸಿಎಂ ನಾರಾಯಣಸಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಈ ಬಗ್ಗೆ ವಿವಾದ ಆಗುತ್ತಲೇ ಈ ಆದೇಶವನ್ನು ವಾಪಸ್ ಪಡೆಯಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಬಿಹಾರ ಸೋಲಿನ ಬಳಿಕ ಪ್ರಶಾಂತ್ ಕಿಶೋರ್ - ಪ್ರಿಯಾಂಕಾ ಗಾಂಧಿ ರಹಸ್ಯ ಭೇಟಿ?
Karnataka News Live: ಬುರುಡೆ ಚಿನ್ನಯ್ಯನಿಗೆ ಕೊನೆಗೆ ಬಿಡುಗಡೆ ಭಾಗ್ಯ; ಸಿಕ್ತು ಶ್ಯೂರಿಟಿ